ಗಾಂಜಾ ಮಾರಾಟ: ಎಂಜಿನಿಯರಿಂಗ್ ವಿದ್ಯಾರ್ಥಿಸಹಿತ ಇಬ್ಬರ ಬಂಧನ

Spread the love

ಗಾಂಜಾ ಮಾರಾಟ: ಎಂಜಿನಿಯರಿಂಗ್ ವಿದ್ಯಾರ್ಥಿಸಹಿತ ಇಬ್ಬರ ಬಂಧನ

ಮಂಗಳೂರು: ಗಂಜಿ ಮಠದ ಐಟಿ ಪಾರ್ಕ್ ಬಳಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಹಿತ ಇಬ್ಬರನ್ನು ಬಜ್ಪೆ ಠಾಣಾ ಪೋಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡಿನ ತಳಂಗೆರೆ ನಿವಾಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಮಹಮ್ಮದ್ ಅಶ್ವದ್ (23) ಮತ್ತು ಭಟ್ರಕೆರೆ ನಿವಾಸಿ ಅಜ್ಮಲ್ (20) ಎಂದು ಗುರುತಿಸಲಾಗಿದೆ.

ಗಾಂಜಾ ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಬಜ್ಪೆ ಠಾಣಾ ಪೋಲಿಸರು ಸ್ಥಳಕ್ಕೆ ಧಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ 95 ಗ್ರಾಂನ 10 ಪ್ಯಾಕೆಟ್ ಗಾಂಜಾ, 1 ಬೈಕ್, 1 ಸ್ಕೂಟರ್ ಸೇರಿದಂತೆ ರೂ 61500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಧಾಳಿ ಸಂದರ್ಭ ಗಾಂಜಾ ಮಾರಾಟಕ್ಕೆ ಬಂದ ಇಬ್ಬರು ಪರಾರಿಯಾಗಿದ್ದು, ಬಂಧಿತ ಆರೋಪಿಗಳಿಗೆ ಪೋಲಿಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.


Spread the love