ಗಾಂಜಾ ಸಾಗಾಟ ಆರೋಪಿಗಳ ಬಂಧನ

Spread the love

ಗಾಂಜಾ ಸಾಗಾಟ ಆರೋಪಿಗಳ ಬಂಧನ

ಮಂಗಳೂರು: ನಗರದ ಕಸಬಾ ಬೆಂಗ್ರೆ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ಕುದ್ರೋಳಿ ಬೆಂಗರೆ ನಿವಾಸಿ ಅಬ್ದುಲ್ ಎಂ (42) ಮತ್ತು ಮಂಜನಾಡಿ ನಿವಾಸಿ ಫಾರೂಕ್ (52) ಎಂದು ಗುರುತಿಸಲಾಗಿದೆ.

ಫೆಬ್ರವರಿ 27 ರಂದು ಕಸಬಾ ಬೆಂಗ್ರೆಯ ಸೂಪರ್ ಸ್ಟಾರ್ ಫುಟ್ ಬಾಲ್ ಗ್ರೌಂಡ್ ಹತ್ತಿರ ತಾತ್ಕಾಲಿಕವಾಗಿ ನಿರ್ಮಿಸಿದ ಚೆಕ್ ಪೋಸ್ಟ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಕೆಎ 19ಇ.ಎಲ್. 5249ನೇ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ವಾಹನ ತಪಾಸಣೆ ಮಾಡುತ್ತಿದ್ದಾಗ ಸ್ಥಳದಿಂದ ಪರಾರಿಯಾಗಲು ಯತ್ನಿಸಿದವರನ್ನು ಪಣಂಬೂರು ಠಾಣಾ ಪೊಲೀಸರು ಬೆನ್ನಟ್ಟಿ ಹಿಡಿದು ವಿಚಾರಿಸಿ ವಾಹನ ತಪಾಸಣೆ ಮಾಡಿದಾಗ ಟಿ.ವಿ.ಎಸ್ ವೇಗೋ ಮೋಟಾರು ಸೈಕಲಿನ ಸೀಟಿನಡಿಯಲ್ಲಿ ರೂ. 25,000/- ಮೌಲ್ಯದ  1 ಕೆ.ಜಿ 100 ಗ್ರಾಂ ಗಾಂಜಾ ಇರುವುದು ಕಂಡು ಬಂದಿದ್ದು ಈ ಇಬ್ಬರು ಆರೋಪಿಗಳನ್ನು ಪಣಂಬೂರು ಠಾಣಾ ಪಿ.ಎಸ್.ಐ(ಕಾನೂನು ಸುವ್ಯವಸ್ಥೆ) ಶ್ರೀ ಎಂ.ಎನ್ ಉಮೇಶ್ ಕುಮಾರ್ ಹಾಗೂ ಸಿಬ್ಬಂದಿಯವರು ವಶಕ್ಕೆ ತೆಗೆದು ಅವರಿಂದ ಗಾಂಜಾವನ್ನ ಮತ್ತು ಸಾಗಾಟಕ್ಕೆ ಬಳಸಿದ ದ್ವಿಚಕ್ರ ವಾಹನವನ್ನ ಸ್ವಾಧೀನಪಡಿಸಿಕೊಂಡಿರುವುದಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಶ್ರೀ. ಹನುಮಂತರಾಯ, ಉಮಾ ಪ್ರಶಾಂತ್ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ರಫೀಕ್.ಕೆ.ಎಮ್, ಪಣಂಬೂರು, ಠಾಣಾ ಪಿ.ಎಸ್.ಐ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್ ಉಮೇಶ್ ಕುಮಾರ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ/ ಸಿಬ್ಬಂದಿಗಳು ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.


Spread the love