ಗೀತಾನಂದ ಫೌಂಡೇಶನ್ ವತಿಯಿಂದ ಉಚಿತ ನೋಟ್ಸ್ ಪುಸ್ತಕ, ವಿದ್ಯಾರ್ಥಿ ವೇತನ ವಿತರಣೆ

ಕೋಟ: ಕಡಲ ತಡಿಯ ಈ ಗ್ರಾಮೀಣ ಭಾಗದಲ್ಲಿ ಗೀತಾನಂದ ಫೌಂಡೇಶನ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸಹಕಾರ ಅತ್ಯಮೂಲ್ಯವಾದದ್ದು. ಪ್ರತಿ ವರ್ಷವು ಕೂಡ ಫೌಂಡೇಶನ್‍ನಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮ ನಡೆಸುತ್ತಿರುವುದು ಮುಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತಿದೆ ಎಂದು ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಹೇಳಿದರು.

image001geethananda-foundation-book-distribution-20160601 image002geethananda-foundation-book-distribution-20160601

ಅವರು ಮಂಗಳವಾರದಂದು ಮಣೂರು ಸರಕಾರಿ ಸಂಯಕ್ತ ಶಾಲೆಯ ಗೀತಾನಂದ ಬಯಲು ರಂಗ ಮಂದಿರದಲ್ಲಿ ಗೀತಾನಂದ ಫೌಂಡೇಶನ್ (ರಿ.) ಮಣೂರು ಪಡುಕರೆ ಅವರ ವತಿಯಿಂದ ಆಯೋಜಿಸಲಾದ ಉಚಿತ ನೋಟ್ಸ್ ಪುಸ್ತಕ ಮತ್ತು ವಿದ್ಯಾರ್ಥಿ ವೇತನ ವಿತರಣೆ, ಪ್ರತಿಭಾ ಪರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಸೌಲಭ್ಯಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪ್ರತಿಭಾವಂತರಾಗಿ ಶಾಲೆಯ ಕೀರ್ತಿ ಬೆಳಗಬೇಕು, ತಾವು ಕಲಿತ ಶಾಲೆಗೆ ಕೊಡುಗೆಗಳಾಗಬೇಕು. ಅತ್ಯಂತ ಹಿಂದುವುಳಿದ ಬಡ ವಿದ್ಯಾರ್ಥಿಗಳ ಭವಿಷ್ಯ ಭದ್ರವಾಗಬೇಕು ಆ ನಿಟ್ಟಿನಲ್ಲಿ ನಾವು ಸಹಕಾರ ನೀಡಲಿದ್ದೇವೆ ಎಂದರು.

image003geethananda-foundation-book-distribution-20160601 image005geethananda-foundation-book-distribution-20160601

ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಸಿ, ನಮ್ಮ ಹಿರಿಯರ ಶ್ರಮದ ಫಲ ಸ್ವರೂಪವಾಗಿ ಇಂದು ಈ ಕಡಲ ತಡಿಯಲ್ಲಿ ಒಂದು ಉತ್ತಮ ಶಿಕ್ಷಣ ಸಂಸ್ಥೆ ತಲೆ ಎತ್ತಿ ನಿಂತಿದೆ. ಗೀತಾನಂದ ಫೌಂಡೇಶನ್ ಈ ವರ್ಷ 13 ಲಕ್ಷ ರೂಪಾಯಿಗಳನ್ನು ಆರೋಗ್ಯದ ಉದ್ದೇಶಕ್ಕೂ, 11 ಲಕ್ಷ ರೂಪಾಯಿಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ನೀಡಿದೆ. ಅಲ್ಲದೇ ಅತ್ಯಂತ ಕಷ್ಟದಲ್ಲಿರುವ ಸುಮಾರು 230 ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕವನ್ನು ಕೂಡ ಪಾವತಿಸಿದೆ. ಎಲ್ಲಾ ವರ್ಗದವರಿಗೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ ಆ ಹಿನ್ನಲೆಯಲ್ಲಿ ಮುಂದೆ ಕೂಡ ನಿಮ್ಮೊಂದಿಗೆ ನಮ್ಮ ಸಂಸ್ಥೆ ನಿಲ್ಲಲಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್, ಕೋಟ ಪಂಚಾಯಿತಿ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಡಾ.ಪ್ರಕಾಶ್ ತೋಳಾರ್, ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಎಸ್. ನಾಯಕ್, ಉಡುಪಿ ಜಿಲ್ಲಾ ಮೊಗವೀರ ಸಂಘಟನೆ ಅಧ್ಯಕ್ಷ ಗಣೇಶ್ ಕಾಂಚನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿಯ ವಿಷಯ ಪರಿವೀಕ್ಷಕ ನಾಗರಾಜ್, ಮಣೂರು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಾವಿತ್ರಮ್ಮ ಎಲ್.,ಚಿತ್ರಪಾಡಿ ಸ.ಹಿ.ಪ್ರಾ. ಶಾಲೆಯ ಜ್ಯೋತಿ, ಮಣೂರು ರಾಮ ಪ್ರಸಾದ ಹಿ.ಪ್ರಾ ಶಾಲೆಯ ಮುಖ್ಯ ಶಿಕ್ಷಕ ಉದಯ ಮಯ್ಯ, ಕೋಟತಟ್ಟು ಸ.ಹಿ.ಪ್ರಾ. ಶಾಲೆಯ ಜಾನಕಿ, ಹೊಸ ಕಾರ್ಕಡ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ಪ್ರಭಾಕರ ಕಾಮತ್, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರವೀಂದ್ರ ಶೆಟ್ಟಿ, ಮೊಗವೀರ ಸಂಘಟನೆ ಕೋಟ ಘಟಕದ ಅಧ್ಯಕ್ಷ ಗಿರೀಶ್ ಬಂಗೇರ, ಮಹಿಳಾ ಸಂಘಟನೆಯ ಅಧ್ಯಕ್ಷೆ ಗುಲಾಬಿ ದೇವದಾಸ್ ಬಂಗೇರ, ಸಿಆರ್‍ಪಿ ಪದ್ಮಜ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

image004geethananda-foundation-book-distribution-20160601 image006geethananda-foundation-book-distribution-20160601

ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲೆಯ ಸುಮಾರು 1200 ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ, ಪರಿಸರದ 350 ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, 2015/16ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಪಾಸಾದ 17 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 2000 ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಮಂಗಳೂರು ವಿಶ್ವ ವಿದ್ಯಾನಿಲಯದ ಎಮ್‍ಎಸ್‍ಸಿ ಗಣೀತ ಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಪಡೆದ ಕಮಲಾಕ್ಷಿ ಕೆ, ಕರ್ನಾಟಕ ರಾಜ್ಯ ಯುವ ವಿಜ್ಞಾನಿ 2015 ಪ್ರಶಸ್ತಿ ಪುರಸ್ಕøತ ಅನಿಕೇತ್ ಶೆಣೈ, ಯುವ ವಿಜ್ಞಾನಿ ಕಾರ್ತಿಕ್ ಮತ್ತು ವಿಜ್ಞಾನ ಮಾದರಿಯಲ್ಲಿ ಸಾಧನೆ ಮಾಡುತ್ತಿರುವ ಸಂತೋಷ ದೇವಾಡಿಗ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಯಿತು.
ವಾಹಿನೀ ಯುವಕ ಮಂಡಲದ ಅಧ್ಯಕ್ಷ ರಮೇಶ್ ಎಚ್.ಕುಂದರ್ ಸ್ವಾಗತಿಸಿದರು. ಮಮತಾ ಗುಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.