ಗುರುಪುರ ಹರೀಶ್ ಶೆಟ್ಟಿ ಕೊಲೆ ಯತ್ನ ; ಮೂವರ ಬಂಧನ

Spread the love

ಗುರುಪುರ ಹರೀಶ್ ಶೆಟ್ಟಿ ಕೊಲೆ ಯತ್ನ ; ಮೂವರ ಬಂಧನ

ಮಂಗಳೂರು : ಗುರುಪುರ ಸೂರಲ್ಪಾಡಿ ಬಳಿ ಸೆ.24 ರಂದು ನಡೆದ ಹರೀಶ್ ಶೆಟ್ಟಿ ಎಂಬವರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ರೌಡಿಶೀಟರ್ ಒಬ್ಬ ಸೇರಿದಂತೆ ಮೂವರನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸೂರಲ್ಪಾಡಿ ನಿವಾಸಿ ಮಹಮ್ಮದ್ ಶಮೀರ್ (27), ಕೊಳಂಬೆ ನಿವಾಸಿ ಇಸಾನ್ (21), ರೌಡಿ ಶೀಟರ್ ಉಳಾಯಿಬೆಟ್ಟು ನಿವಾಸಿ ಮಹಮ್ಮದ್ ಖಾಲೀದ್ (3)) ಎಂದು ಗುರುತಿಸಲಾಗಿದೆ.

ಆರೋಪಿಗಳು ಕೃತ್ಯಕ್ಕೆ ಬಳಿಸಿದ ಮೋಟಾರ್ ಸೈಕಲ್ ಹಾಗೂ ಮೊಬೈಲ್ ಪೋನ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಹಾಯಕ ಪೊಲೀಸ್ ಆಯುಕ್ತರಾದ ರಾಜೇಂದ್ರ ಡಿ.ಎಸ್ ರವರ ನಿರ್ದೇಶದಂತೆ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸ್ ನಿರೀಕ್ಷಕರಾದ ಎಸ್. ಪರಶಿವಮೂರ್ತಿ , ಪೊಲೀಸ್ ಉಪ ನಿರೀಕ್ಷಕರಾದ ಶಂಕರ ನಾಯರಿ, ಎಎಸ್ಐ ರಾಮಚಂದ್ರ, , ಹೆಚ್.ಸಿ ಚಂದ್ರಮೋಹನ್, ರಾಜೇಶ್, ಪೊಲೀಸ್ ಕಾನ್ಸ್ ಟೇಬಲ್ ಗಳಾದ ಪ್ರೇಮಾನಂದ, , ಶಶಿಧರ, ರವರು ಭಾಗವಹಿಸಿರುತ್ತಾರೆ.


Spread the love