ಗೃಹಲಕ್ಷ್ಮೀ ಹಣ ಕೂಡಿಟ್ಟು ಮೊಬೈಲ್ ಖರೀದಿಸಿ ವಾಲ್ ಪೇಪರ್ ನಲ್ಲಿ ಸಿಎಂ ಸಿದ್ದು ಫೋಟೋ ಇಟ್ಟ ಮಹಿಳೆ!

Spread the love

ಗೃಹಲಕ್ಷ್ಮೀ ಹಣ ಕೂಡಿಟ್ಟು ಮೊಬೈಲ್ ಖರೀದಿಸಿ ವಾಲ್ ಪೇಪರ್ ನಲ್ಲಿ ಸಿಎಂ ಸಿದ್ದು ಫೋಟೋ ಇಟ್ಟ ಮಹಿಳೆ!

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ಯಿಂದ ಪ್ರತಿ ತಿಂಗಳು ಸಿಗುವ 2000 ರೂಪಾಯಿ ಹಣವನ್ನು ಕೂಡಿಟ್ಟು ಮಹಿಳೆಯೊಬ್ಬಳು ಮೊಬೈಲ್ ಖರೀದಿಸಿ, ತಮ್ಮ ಫೋಟೋವನ್ನು ವಾಲ್ಪೇಪರ್ನಲ್ಲಿ ಅಳವಡಿಸಿಕೊಂಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಮಹಿಳೆಯ ಫೋಟೋವನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಹಾವೇರಿ ಜಿಲ್ಲೆಯ ನಿವಾಸಿ, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ಪ್ರತಿ ತಿಂಗಳ ಹಣವನ್ನು ಕೂಡಿಟ್ಟು, ತಮ್ಮ ಇಷ್ಟದ ಮೊಬೈಲ್ ಖರೀದಿಸಿ, ನನ್ನ ಫೋಟೋವನ್ನು ವಾಲ್ ಪೇಪರ್ನಲ್ಲಿರಿಸಿ ಸಂಭ್ರಮಿಸಿದ್ದಾರೆ. ಮೊನ್ನೆ ಹಾವೇರಿಯಲ್ಲಿ ನಡೆದ ಸಮಾವೇಶಕ್ಕೆ ಹೊಸ ಮೊಬೈಲ್ನೊಂದಿಗೆ ಬಂದಾಗ ಅವರ ಖುಷಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗೃಹಲಕ್ಷ್ಮಿ ಯೋಜನೆ ಬಡವರ ಮನೆಯ ಹಸಿವು ನೀಗಿಸುತ್ತಿರುವುದು ಮಾತ್ರವಲ್ಲ, ನಾಡಿನ ಲಕ್ಷಾಂತರ ತಾಯಂದಿರು, ಅಕ್ಕತಂಗಿಯರ ಕನಸುಗಳನ್ನು ನನಸಾಗಿಸಿದೆ. ಕೆಲವರು ಟಿವಿ ಖರೀದಿಸಿದರೆ, ಮತ್ತೆ ಕೆಲವರು ಮೊಬೈಲ್, ಫ್ರಿಡ್ಜ್, ಬಟ್ಟೆ, ಬರೆ ಹೀಗೆ ತಿಂಗಳ ಹಣ ಕೂಡಿಟ್ಟು ಇಷ್ಟದ ವಸ್ತುಗಳನ್ನು ಖರೀದಿಸುತ್ತಿದ್ದಾರೆ.

ಬಡಜನರ ಬದುಕಿಗೆ ನೆರವಾಗಬೇಕು, ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ತನ್ನ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆ ಈಡೇರಿಸುತ್ತಿದೆ. ಯೋಜನೆ ಜಾರಿಗೆ ಕೊಟ್ಟ ನನ್ನಲ್ಲಿ ಸಾರ್ಥಕಭಾವ ಮೂಡಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.


Spread the love