ಗೇರು ಬೀಜ ಕಾರ್ಖಾನೆ ಮಾಲಿಕರು ಹಾಗೂ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದ ಕೇಂದ್ರ ಸರ್ಕಾರ : ವಿಶ್ವಾಸ ಶೆಟ್ಟಿ

Spread the love

ಗೇರು ಬೀಜ ಕಾರ್ಖಾನೆ ಮಾಲಿಕರು ಹಾಗೂ ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದ ಕೇಂದ್ರ ಸರ್ಕಾರ : ವಿಶ್ವಾಸ ಶೆಟ್ಟಿ

ಕುಂದಾಪುರ: ಕೇಂದ್ರ ಸರಕಾರ ಅವೈಜ್ಞಾನಿಕ ತೆರಿಗೆ ವಿದಿಸುವ ಮೂಲಕ ಗೇರು ಬೀಜ ಕಾರ್ಖಾನೆಗಳು ಸಂಕಷ್ಟ ಎದುರಿಸುತ್ತಿದೆ ಹೆಚ್ಚಿನ ಪ್ರಮಾಣದಲ್ಲಿ ಜಿಎಸ್ ಟಿ ವಿದಿಸುತ್ತಿದ್ದು ಗೇರು ಬೀಜ ಅಮದು ಮಾಡಿಕೊಳ್ಳಲು ತೂಂದರೆ ಉಂಟಾಗಿ ಕಾರ್ಮಿಕರ ಕೆಲವು ದಿನ ಕೆಲಸವಿಲ್ಲದೆ ತೂಂದರೆ ಅನುಭವಿಸಿದ್ದಾರೆ ಎಂದು ಉಡುಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿಯ ಜಿಲ್ಲಾದ್ಯಕ್ಷರಾದ ವಿಶ್ವಾಸ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ

ಮುಂದುವರಿದ ದೇಶಗಳಲ್ಲಿ ಗೇರು ಬೀಜ ಅಮದು ಮಾಡಿಕೊಳ್ಳಲು ಕಷ್ಟಮ್ ಡ್ಯೂಟಿಯನ್ನು ಕೇಂದ್ರ ಸರಕಾರ ವಿದಿಸುತ್ತಿದ್ದು ಹಿಂದುಳಿದ ದೇಶಗಳಿಂದ ಅಮದು ಮಾಡಿಕೊಂಡರೇ ಕಷ್ಟಮ್ ಡ್ಯೂಟಿ ವಿದಿಸದೆ ಹಿಂದುಳಿದ ವಿದೇಶಗಳ ಬಗ್ಗೆ ಇರುವ ಕಾಳಜಿ ನಮ್ಮ ದೇಶದ ಗೇರುಬೀಜ ಕಾರ್ಖಾನೆ ಮಾಲಿಕರ ಹಾಗೂ ಕಾರ್ಮಿಕರ ಮೇಲೆ ಇಲ್ಲದಿರುವುದು ಬೇಸರದ ಸಂಗತಿ ಈ ಎರಡು ಅವೈಜ್ಞಾನಿಕ ತೆರಿಗೆ ನೀತಿಯಿಂದ ಕಾರ್ಖಾನೆಗಳು ನಷ್ಟ ಅನುಭವಿಸುತ್ತಿದ್ದು ಕಾರ್ಮಿಕರ ಕೆಲವು ದಿನ ಕೆಲಸ ಇಲ್ಲದೆ ಕಷ್ಟ ಪಡುತ್ತಿದ್ದಾರೆ ಇದೆ ತೆರಿಗೆ ನೀತಿ ಮುಂದುವರಿದರೆ ಶಾಶ್ವತವಾಗಿ ಕೆಲಸ ಕಳೆದುಕೊಳ್ಳುವ ಬೀತಿಯಲ್ಲಿ ಗೇರು ಬೀಜ ಕಾರ್ಮಿಕರು ಇದ್ದಾರೆ ಈ ಸಮಸ್ಯೆ ಬಗ್ಗೆ ಸಂಸತ್ತಿನಲ್ಲಿ ಕಾರ್ಮಿಕರ ಪರವಾಗಿ ದ್ವನಿ ಎತ್ತದ ಶೋಭ ಕರಂದ್ಲಾಜೆ ಗೆ ಉಡುಪಿ ಚಿಕ್ಕಮಗಳೂರು ಜಿಲ್ಲೆಯ ಜನತೆ ತಕ್ಕ ಪಾಠ ಕಲಿಸಬೇಕಾಗಿದೆ ಈ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇದ್ದ ಈ ಬಗ್ಗೆ ಕೇಂದ್ರ ಸರಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಕಾಂಗ್ರೆಸ್ ಜೆಡಿಎಸ್ ಅಬ್ಯಾರ್ಥಿ ಪ್ರಮೋದ್ ಮದ್ವರಾಜ್ ಅವರನ್ನು ಗೆಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳುಬೇಕು ಎಂದು ವಿಶ್ವಾಸ ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ


Spread the love