ಗೋಮಾಂಸ ಸೇವನೆ ಹೇಳಿಕೆ ಹಿಂಪಡೆಯಲು ಪೇಜಾವರ ಶ್ರೀಗಳಿಗೆ ಪ್ರಮೋದ್ ಮುತಾಲಿಕ್ ಆಗ್ರಹ

Spread the love

ಗೋಮಾಂಸ ಸೇವನೆ ಹೇಳಿಕೆ ಹಿಂಪಡೆಯಲು ಪೇಜಾವರ ಶ್ರೀಗಳಿಗೆ ಪ್ರಮೋದ್ ಮುತಾಲಿಕ್ ಆಗ್ರಹ

ಹುಬ್ಬಳ್ಳಿ(ಪ್ರಜಾವಾಣಿ ವಾರ್ತೆ): ಹಿಂದೂಗಳೂ ಗೋಮಾಂಸ ತಿನ್ನುತ್ತಾರೆ ಎಂಬ ಉಡುಪಿ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿಕೆ ಖಂಡನೀಯ. ಶ್ರೀಗಳು ತಮ್ಮ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಗುರುವಾರ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶ್ರೀಗಳ ಹೇಳಿಕೆಯು ಗೋಹತ್ಯೆ ವಿರೋಧಿ ಹೋರಾಟವನ್ನು ಕುಗ್ಗಿಸುವಂತಿದೆ. ಇದರಿಂದ ಗೋ ಹಂತಕರಿಗೆ ಹೊಸ ಅಸ್ತ್ರ ಸಿಕ್ಕಂತಾಗಿದೆ’ ಎಂದರು.

‘ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದನ್ನು ಖಂಡಿಸಿ ಜುಲೈ 2ರಂದು ರಾಜ್ಯದ ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರದಲ್ಲಿ ಶ್ರೀರಾಮ ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು. ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಅವರು ತಿಳಿಸಿದರು.


Spread the love