ಗೋಹತ್ಯೆ ವಿಚಾರದಲ್ಲಿ ಮಾನವ ಹತ್ಯೆ ಖಂಡನೀಯ: ಎಸ್ಸೆಸ್ಸೆಫ್

Spread the love

ಗೋಹತ್ಯೆ ವಿಚಾರದಲ್ಲಿ ಮಾನವ ಹತ್ಯೆ ಖಂಡನೀಯ: ಎಸ್ಸೆಸ್ಸೆಫ್
ದೇಶದ ಶೇ.80ರಷ್ಟು ಜನರ ಆಹಾರ ಪದ್ಧತಿಯಾಗಿರುವ ಮಾಂಸಾಹಾರವನ್ನು ತಡೆಯಲು ಕೇಂದ್ರ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಮುಸ್ಲಿಂ ಹಾಗೂ ದಲಿತರ ಮೇಲೆ ಅವ್ಯಾಹತವಾಗಿ ಹಲ್ಲೆ ಮತ್ತು ಹತ್ಯೆಗಳು ನಡೆಯುತ್ತಿರುವುದು ಖಂಡನೀಯ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಗೋಹತ್ಯೆ ವಿಚಾರದಲ್ಲಿ ಸ್ವಯಂ ಘೋಷಿತ ಧರ್ಮ ರಕ್ಷಕರಿಂದ ನಿರಂತರವಾಗಿ ಬರುತ್ತಿರುವ ಬೆದರಿಕೆಯ ಹೇಳಿಕೆಗಳಿಂದ ಜನಸಾಮಾನ್ಯರು ಭಯಪಡುವಂತಾಗಿದೆ. ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಸರಕಾರ ಕ್ರಮ ಕೈಗೊಳ್ಳಲಿ ಎಂದು ಎಸ್ಸೆಸ್ಸೆಫ್ ಆಗ್ರಹಿಸಿದೆ.

Spread the love