ಗ್ರೀನ್ ಜಿಲ್ಲೆ ಉಡುಪಿಗೆ ದುಬೈಯಿಂದ ಆಗಮಿಸಿದ ಐದು ಮಂದಿಯಲ್ಲಿ ಕೊರೋನ ಪಾಸಿಟಿವ್

Spread the love

ಗ್ರೀನ್ ಜಿಲ್ಲೆ ಉಡುಪಿಗೆ ದುಬೈಯಿಂದ ಆಗಮಿಸಿದ ಐದು ಮಂದಿಯಲ್ಲಿ ಕೊರೋನ ಪಾಸಿಟಿವ್ 

ಉಡುಪಿ: ಹಸಿರು ಜಿಲ್ಲೆಯಾಗಿದ್ದ ಉಡುಪಿ ಜಿಲ್ಲೆಗೆ ಶುಕ್ರವಾರ ಒಂದೇ ದಿನ ದುಬೈನಿಂದ ಬಂದ ಐದು ಮಂದಿಗೆ ಕೊರೋನಾ ಸೋಂಕ ದೃಢಪಟ್ಟಿದೆ.

ಮೇ 15ರಂದು ದುಬೈ ನಿಂದ ಬಂದ ವಿಮಾನದಲ್ಲಿ ಉಡುಪಿ ಜಿಲ್ಲೆಯ 52 ಮಂದಿಯಿದ್ದು ಅವರನ್ನು ಹೊಟೇಲ್ ಮತ್ತು ಸರ್ಕಾರಿ ಕ್ವಾರಂಟೈನ್ ಮಾಡಲಾಗಿತ್ತು. ಅವರ ಗಂಟಲ ದ್ರವವನ್ನು ಮಂಗಳೂರಿಗೆ ಪರೀಕ್ಷೆಗಾಗಿ ರವಾನಿಸಲಾಗಿತ್ತು. ಅದರ ವರದಿ ಇಂದು ಬಂದಿದ್ದು ಅದರಲ್ಲಿ ಐದು ಮಂದಿಗೆ   ಕೊರೋನ ವೈರಸ್ ಸೋಂಕು  ದೃಢಪಟ್ಟಿದೆ ಎನ್ನಲಾಗಿದೆ

ಕಳೆದ 47 ದಿನಗಳಿಂದ ಯಾವುದೇ ಪಾಸಿಟಿವ್ ಕೇಸ್ ವರದಿಯಾಗದ ಉಡುಪಿಯಲ್ಲಿ ಶುಕ್ರವಾರ ಐದು ಪಾಸಿಟಿವ್ ಪ್ರಕರಣಗಳು ಬಂದಿದ್ದು ಈ ಹಿನ್ನೆಲೆಯಲ್ಲಿ ಐದು ಮಂದಿಯನ್ನು ಅವರು ಉಳಿದುಕೊಂಡಿರುವ ಹೊಟೇಲ್‌ಗಳಿಂದ ಉಡುಪಿಯ ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದು


Spread the love