ಚಂದ್ರದರ್ಶನ ಹಿನ್ನಲೆ; ಶುಕ್ರವಾರ ಕರಾವಳಿಯಲ್ಲಿ ಈದ್ ಆಚರಣೆ

Spread the love

ಚಂದ್ರದರ್ಶನ ಹಿನ್ನಲೆ; ಶುಕ್ರವಾರ ಕರಾವಳಿಯಲ್ಲಿ ಈದ್ ಆಚರಣೆ

ಉಡುಪಿ: ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಶುಕ್ರವಾರ ಜೂನ್ 15 ಆಚರಿಸಲು ಮುಸಲ್ಮಾನ ಬಾಂಧವರು ನಿರ್ಧರಿಸಿದ್ದಾರೆ.

ಕೇರಳದ ಕ್ಯಾಲಿಕಟ್ ನಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಶವ್ವಾಲ್ ನ ಪ್ರಥಮ ಚಂದ್ರದರ್ಶನ ಆಗಿರುವುದರಿಂದ ಶುಕ್ರವಾರ ಉಡುಪಿ ಮತ್ತು ದಕ ಜಿಲ್ಲೆಯಲ್ಲಿ ಈದುಲ್ ಫಿತ್ರ್ ಆಚರಿಸಲು ದಕ ಜಿಲ್ಲಾ ಖಾಝಿ ಆಲ್ ಹಾಜ್ ತ್ವಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.


Spread the love