ಚರ್ಚ್ ದಾಳಿಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ

Spread the love

ಚರ್ಚ್ ದಾಳಿಯ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಇಬ್ಬರ ಬಂಧನ

ಮಂಗಳೂರು : ಮಂಗಳೂರು ನಗರದಲ್ಲಿ ಚರ್ಚ್ ದಾಳಿಯಾಗಿದೆ ಎಂದು ಸುಳ್ಳು ಸಂದೇಶಗಳನ್ನು ವಾಟ್ಸಾಫ್ ಮುಖಾಂತರ ಹರಿಬಿಟ್ಟ ಬಗ್ಗೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ, ತನಿಖಾಧಿಕಾರಿಯಾದ ಮಂಗಳೂರು ಸೆಂಟ್ರಲ್ ಉಪ ವಿಭಾಗದ ಎಸಿಪಿಯವರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಚಿಕ್ಕಮಗಳೂರು ಎನ್.ಆರ್.ಪುರ ನಿವಾಸಿಗಳಾದ ಸುನೀಲ್ ವೇಗಸ್(34) ಮತ್ತು ಸಚಿತ್ ಪಿ.ಪಿ. (23) ಎಂದು ಗುರುತಿಸಲಾಗಿದೆ.

ವಿಧಾನಸಭಾ ಚುನಾವಣೆಯ ಫಲಿತಾಂಶದ ದಿನ ಮಂಗಳೂರು ನಗರದಲ್ಲಿ ಚರ್ಚಿನ ಮೇಲೆ ದಾಳಿಯಾಗಿದೆ ಎಂದು ಸುಳ್ಳು ಸಂದೇಶಗಳನ್ನು ವಾಟ್ಸಾಪ್ ಮೂಲಕ ಆರೋಪಿಗಳು ಹರಿಯಬಿಟ್ಟಿದ್ದು ಇದರಿಂದ ಎರಡು ಕೋಮುಗಳ ನಡುವೆ ಗಲಭೆ ಸೃಷ್ಟಿಸುವ ಹುನ್ನಾರ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸಿದ ಪೋಲಿಸರು ಆರೋಪಿಗಳನ್ನು ಬಂದಿಸಿದ್ದಾರೆ.

ಆರೋಪಿಗಳನ್ನು ಮೇ 30ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.


Spread the love