ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಗೆ ಚುಂಬಿಸಿದ ಬಿಜೆಪಿ ನಾಯಕ!

Spread the love

ಚಲಿಸುತ್ತಿದ್ದ ಬಸ್ಸಿನಲ್ಲಿ ಮಹಿಳೆಗೆ ಚುಂಬಿಸಿದ ಬಿಜೆಪಿ ನಾಯಕ!

ಮುಂಬೈ: ಮಹಾರಾಷ್ಟ್ರದ ಭಾರತೀಯ ಜನತಾ ಪಕ್ಷದ ನಾಯಕನೊಬ್ಬ ಚಲಿಸುತ್ತಿರುವ ಬಸ್ಸಿನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಬಿಜೆಪಿ ನಾಯಕ ರವೀಂದ್ರ ಬವಾಂಥಾಡೆ ಎಂಬಾತ ಮಹಿಳೆಯೊಂದಿಗೆ ನಾಗ್ಪುರದಿಂದ ಗಡ್ಚಿರೋಲಿ ಜಿಲ್ಲೆಯ ಚಂದ್ರಾಪುರ್‍ಗೆ ಬಸ್ಸಿನಲ್ಲಿ ಬರುತ್ತಿರುವಾಗ ಈ ಕೃತ್ಯ ಎಸಗಿದ್ದಾನೆ.

ವಿಡಿಯೋದಲ್ಲಿ ಏನಿದೆ: ಬಿಜೆಪಿ ನಾಯಕ ರವೀಂದ್ರ ಬವಾಂಥಾಡೆ ಬಸ್ಸಿನ ಕೊನೆಯ ಸೀಟಿನಲ್ಲಿ ಪ್ರಯಾಣಿಕ ಮುಂದೆ ಮಹಿಳೆಯೊಬ್ಬರಿಗೆ ಮುತ್ತಿಟ್ಟು ಮುದ್ದಾಡುತ್ತಿರುವ ದೃಶ್ಯ ಸೆರೆಯಾಗಿದೆ. ಬಸ್ಸಿನಲ್ಲಿ ಸಿಸಿಟಿವಿ ಅಳವಡಿಸಿದರಿಂದ ರವೀಂದ್ರ ಅವರ ಸಲ್ಲಾಪ ಬಯಲಾಗಿದ್ದು, ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ.

ಕೆಲಸ ನೀಡಿ ನಿನ್ನನ್ನು ಮದುವೆಯಾಗುತ್ತೇನೆ ಎಂದು ಹೇಳಿ ಬಸ್ಸಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ದೂರಿದ್ದಾರೆ. ಮಹಿಳೆ ರವೀಂದ್ರ ಅವರ ವಿರುದ್ಧ ಅತ್ಯಾಚಾರ ಆರೋಪ ಎಂದು ಹೊರಿಸಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ರವೀಂದ್ರ ನಾಪತ್ತೆಯಾಗಿದ್ದಾನೆ.


Spread the love