ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

Spread the love

ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

ಮಂಗಳೂರು: ಮೋಹನ್ ಭಟ್ಕಳ್ ನಿರ್ದೇಶನದಲ್ಲಿ ತಯಾರಾದ ಚಾಪ್ಟರ್ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಎಪ್ರಿಲ್ 7ರಂದು ನಗರದ ಜ್ಯೋತಿ ಟಾಕೀಸ್‍ನಲ್ಲಿ ಜರಗಿತು.

ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‍ಕುಮಾರ್ ರೈ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಭಾಷಾ ಬೆಳವಣಿಗೆಯಲ್ಲಿ ತುಳು ಸಿನಿಮಾಗಳ ಕೊಡುಗೆ ಮಹತ್ತರವಾದುದು. ತುಳು ಭಾಷೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾಗಳಿಂದ ಜನರಿಗೆ ಮನರಂಜನೆಯ ಜತೆಗೆ ಸಮಾಜಕ್ಕೆ ಉತ್ತಮ ಸಂದೇಶವೂ ದೊರೆಯುತ್ತಿದೆ. ತುಳು ಸಿನಿಮಾರಂಗದ ಮಾರುಕಟ್ಟೆ ವಿಸ್ತಾರವಾಗಿ ಬೆಳೆಯಲಿ. ತುಳುವಿನಲ್ಲಿ ಅತ್ಯುತ್ತಮವಾದ ಸದಭಿರುಚಿಯ ಚಿತ್ರಗಳು ಮೂಡಿಬರಲಿ ಎಂದು ಅಜಿತ್‍ಕುಮಾರ್ ರೈ ಮಾಲಾಡಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಟಿ.ಎ.ಶ್ರೀನಿವಾಸ್ ಮಾತನಾಡಿ ತುಳು ಸಿನಿಮಾರಂಗ ಸಮೃದ್ಧವಾಗಿ ಬೆಳೆಯುತ್ತಿದೆ. ಬಹಳಷ್ಟು ಸಿನಿಮಾಗಳ ತಯಾರಿ ಮತ್ತು ಬಹಳಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ದಗೊಂಡಿದೆ. ಈ ಮಧ್ಯೆ ಥಿಯೇಟರ್ ಸಮಸ್ಯೆ ಎದುರಾಗಿದ್ದು ಎಲ್ಲರೂ ಸೇರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದರು. ಸಮಾರಂಭದಲ್ಲಿ ಮೇಯರ್ ಕವಿತಾ ಸನಿಲ್, ಚಲನಚಿತ್ರ ನಿರ್ಮಾಪಕರಾದ ಸುಧಾಕರ್ ಬನ್ನಂಜೆ, ಆರ್.ಧನರಾಜ್, ಫ್ರ್ಯಾಂಕ್ ಫೆರ್ನಾಂಡಿಸ್, ಪ್ರಕಾಶ್ ಪಾಂಡೇಶ್ವರ್, ಕಿಶೋರ್ ಡಿ.ಶೆಟ್ಟಿ , ಮಾಧವ ನಾೈಕ್ ಅಡ್ಯಾರ್, ಶರತ್ ಕದ್ರಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಡಾ.ನಾಗೇಶ್ ಅತ್ತಾವರ, ಡಾ.ದೇವರಾಜ್, ವಿನಯಚಂದ್ರ ಸುವರ್ಣ, ತುಳುನಾಡ ರಕ್ಷಣಾವೇದಿಕೆಯ ಅಧ್ಯಕ್ಷ ಯೊಗೀಶ್ ಶೆಟ್ಟಿ ಜಪ್ಪು, ನಿರ್ದೇಶಕ ಮೋಹನ್ ಭಟ್ಕಳ್, ನಾಯಕನಟ ಅಸ್ತಿಕ ಶೆಟ್ಟಿ, ತುಷಾರ್ ಸುರತ್ಕಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಗೋಪಿನಾಥ ಭಟ್, ತಿಮ್ಮಪ್ಪ ಕುಲಾಲ್ ಉಪಸ್ಥಿತರಿದ್ದರು. ವಿನೀತ್ ಕಾರ್ಯಕ್ರಮ ನಿರೂಪಿಸಿದರು.

ಮಂಗಳೂರಿನಲ್ಲಿ ಜ್ಯೋತಿ, ಬಿಗ್‍ಸಿನೆಮಾಸ್, ಪಿ.ವಿ.ಆರ್, ಸಿನಿಪೆÇಲಿಸ್, ಉಡುಪಿಯಲ್ಲಿ ಡಯನಾ, ಮಣಿಪಾಲದಲ್ಲಿ ಐನಾಕ್ಸ್, ಸುರತ್ಕಲ್‍ನಲ್ಲಿ ನಟರಾಜ್, ಕಾರ್ಕಳದಲ್ಲಿ ರಾಧಿಕಾ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುಳ್ಯದಲ್ಲಿ ಸಂತೋಷ್, ಬೆಳ್ತಂಗಡಿಯಲ್ಲಿ ಭಾರತ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆಕಂಡಿದೆ.

ಕರಾವಳಿ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಆಗುತ್ತಿದೆ, ಇದೇ ರೀತಿ ಕನ್ನಡದ ಸಿನಿಮಾಗಳ ಜೊತೆ ಕರಾವಳಿ ತುಳು ಭಾಷೆಯ, ತುಳು ಸಿನಿಮಾಗಳು ಅಭಿವೃದ್ಧಿ ಆಗಬೇಕು ಎಂದರು. ಜನರ ಪ್ರೋತ್ಸಾಹ ಚಾಪ್ಟರ್ ಸಿನಿಮಾಕ್ಕೆ ಅಗತ್ಯವಿದೆ, ತುಳುನಾಡಿನ ಜನತೆ ಈ ತುಳು ಸಿನಿಮಾವನ್ನು ಯಶಸ್ವಿ ಮಾಡಿಕೊಡುತ್ತಾರೆ ಎಂಬ ನಂಬಿಕೆ ಇದೆ. ಚಾಪ್ಟರ್ ಸಿನಿಮಾದಲ್ಲಿ ತುಳುನಾಡಿನ ಕಲೆ, ಸಂಪ್ರಾದಾಯ, ಆರಾಧನೆಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ನಿರ್ದೇಶಕ ಮೋಹನ್ ಭಟ್ಕಳ ತಿಳಿಸಿದರು.

ಚಾಪ್ಟರ್ ಸಿನಿಮಾದ ನಾಯಕ ಅಸ್ತಿಕ್ ಶೆಟ್ಟಿ ಮಾತಾನಾಡಿ ಕರಾವಳಿಯ ಜನರ ಪ್ರೋತ್ಸಾಹ ಈ ಮೊದಲು ಕೂಡ ಸಿಕ್ಕಿದೆ, ಇದೇ ರೀತಿ ಚಾಪ್ಟರ್ ಸಿನಿಮಾವನ್ನು ತುಳುನಾಡಿನ ಜನರು ಯಶಸ್ವಿ ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಸುರೇಂದ್ರನಾಥ್ “ಚಾಪ್ಟರ್”ಗೆ ಸಂಗೀತ ನೀಡಿದ್ದಾರೆ. ಉಮೇಶ್ ಮೀಜಾರ್, ಲೋಕು ಕುಡ್ಲ, ಕಿಶೋರ್ ಮೂಡಬಿದ್ರೆ ಸಾಹಿತ್ಯ ಒದಗಿಸಿದ್ದಾರೆ. ಚಿತ್ರಕ್ಕೆ ಮಣಿ ಎಜೆ ಕಾರ್ತಿಕೇಯನ್, ಕಿಶೋರ್ ಮೂಡಬಿದ್ರೆ ಮತ್ತು ಉಮೇಶ್ ಮಿಜಾರ್ ಅವರು ಸಂಭಾಷಣೆಯ ಹೊಣೆ ಹೊತ್ತಿದ್ದಾರೆ, ವೈ.ಎಸ್.ಶ್ರೀಧರ್ ಅವರ ಸಂಕಲನವಿದೆ. ಸಿನಿಮಾದಲ್ಲಿ ಅಸ್ತಿಕ್ ಶೆಟ್ಟಿ, ಐಶ್ವರ್ಯ ಹೆಗ್ಡೆ, ಸಂಜನಾ ನಾಯ್ಡು, ಅರವಿಂದ್ ಬೋಳಾರ್, ತಿಮ್ಮಪ್ಪ ಕುಲಾಲ್ ರೋಹಿತ್ ಅಲಿಯಾಸ್ ಸುನಿಲ್, ಗೋಪಿನಾಥ್ ಭಟ್, ಉಮೇಶ್ ಮಿಜಾರ್, ರೂಪ ವರ್ಕಾಡಿ, ಜಯಶ್ರೀ ಕೋಟ್ಯಾನ್ ಕಟಪಾಡಿ, ರಂಜನ್ ಬೋಳಾರ್, ಸುರೇಶ್ ಕುಲಾಲ್, ರೋಶನ್ ಶೆಟ್ಟಿ ಹಾಗು ಇನ್ನಿತರ ಕಲಾವಿದರು ಇದ್ದಾರೆ.


Spread the love