ಚಿಕ್ಕಮಗಳೂರಿನ   ಧರ್ಮಾಧ್ಯಕ್ಷ ಪೂಜ್ಯ ಡಾ. ಜಾನ್ ಬ್ಯಾಪ್ಟಿಸ್ಟ್ ಸಿಕ್ವೇರಾರವರ ನಿಧನ 

ಚಿಕ್ಕಮಗಳೂರಿನ   ಧರ್ಮಾಧ್ಯಕ್ಷ ಪೂಜ್ಯ ಡಾ. ಜಾನ್ ಬ್ಯಾಪ್ಟಿಸ್ಟ್ ಸಿಕ್ವೇರಾರವರ ನಿಧನ 

ಚಿಕ್ಕಮಗಳೂರಿನ ಕಥೋಲಿಕ ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷರಾದ ಪೂಜ್ಯ ಡಾ. ಜಾನ್ ಬ್ಯಾಪ್ಟಿಸ್ಟ್ ಸಿಕ್ವೇರಾರವರು  ಬುಧವಾರ ರಾತ್ರಿ 11.20ಕ್ಕೆ ದೈವಾಧೀನರಾದರು. ಪೂಜ್ಯರಿಗೆ 89 ವರ್ಷ ವಯಸ್ಸಾಗಿತ್ತು.

ದಿನಾಂಕ 24-06-1930 ರಂದು ದಕ್ಷಿಣ ಕನ್ನಡದ ಕಾಟಿಪಳ್ಳ ಎಂಬಲ್ಲಿ ಜನಿಸಿದ ಇವರು ದಿನಾಂಕ 15-04-1958 ರಂದು ಗುರುದೀಕ್ಷೆಯನ್ನು ಪಡೆದು ಚಿಕ್ಕಮಗಳೂರಿನ ಪ್ರಧಾನಾಲಯ, ಮಗ್ಗೆ ಹಾಗೂ ಸಕಲೇಶಪುರ ಧವರ್iಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ ಬಳಿP,À ಉನ್ನತ ವ್ಯಾಸಂಗಕ್ಕಾಗಿ ಫ್ರಾನ್ಸ್‍ಗೆ ತೆರಳಿ, ಧರ್ಮಸಭೆಯ ಕಾನೂನಿನಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸುಮಾರು 20 ವರ್ಷ ಬೆಂಗಳೂರಿನ ಸಂತ ಪೇತ್ರರ ಮಹಾವಿದ್ಯಾಲಯದಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದರು. 11 -06-1997 ರಂದು ಧರ್ಮಾಧ್ಯಕ್ಷ ದೀಕ್ಷೆ ಪಡೆದು 2007ರ ವರೆಗೆ ಚಿಕ್ಕಮಗಳೂರು ಧವರ್iಕ್ಷೇತ್ರದಲ್ಲಿ ಪಾಲನಾ ಸೇವೆಯನ್ನು ನೀಡಿದರು.

ತಮ್ಮ 77 ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಪಡೆದು ಬೆಂಗಳೂರಿನ ಲಿಟಲ್ ಸಿಸ್ಟರ್ಸ್ ಆಫ್ ದಿ ಪೂವರ್ ಕಾನ್ವೆಂಟಿನ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ಪೂಜ್ಯರ ಅಂತಿಮ ಧಾರ್ಮಿಕ ವಿಧಿ ವಿಧಾನಗಳು 11-10-2019 ರಂದು ಮಧ್ಯಾಹ್ನ 3.00 ಘಂಟೆಗೆ ಬೆಂಗಳೂರಿನಲ್ಲಿ ನೆರವೇರಲಿವೆ.

Leave a Reply

  Subscribe  
Notify of