ಚಿಕ್ಕಮಗಳೂರು: 40 ದಿನದ ಬಳಿಕ ಮದ್ಯ ಸಿಕ್ಕ ಖುಷಿಗೆ ಕುಡಿದು ರಸ್ತೆಯಲ್ಲಿಯೇ ‘ಸ್ಲೀಪಿಂಗ್ ಮೋಡ್’ ಗೆ ಜಾರಿದ ವ್ಯಕ್ತಿ

Spread the love

ಚಿಕ್ಕಮಗಳೂರು: 40 ದಿನದ ಬಳಿಕ ಮದ್ಯ ಸಿಕ್ಕ ಖುಷಿಗೆ ಕುಡಿದು ರಸ್ತೆಯಲ್ಲಿಯೇ ‘ಸ್ಲೀಪಿಂಗ್ ಮೋಡ್’ ಗೆ ಜಾರಿದ ವ್ಯಕ್ತಿ

ಮಂಗಳೂರು: ಮದ್ಯ ಪ್ರಿಯನೊಬ್ಬ ತನ್ನ 40 ದಿನ ಆಸೆಯನ್ನು ಒಂದೇ ಸಾರಿ ಈಡೇರಿಸಕೊಂಡು ರಸ್ತೆ ಮಧ್ಯವೇ ಸ್ಲೀಪಿಂಗ್ ಮೋಡ್ ಗೆ ಜಾರಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಸೋಮವಾರ ನಡೆದಿದೆ.

40 ದಿನಗಳ ಬಳಿಕ ರಾಜ್ಯ ಸರಕಾರ ಮದ್ಯಮಾರಾಟಕ್ಕೆ ಅನುಮತಿ ನೀಡಿದ್ದು ಅದರಂತೆ ಬೆಳಿಗ್ಗಿನಿಂದ ವೈನ್ ಶಾಪ್ ಗಳ ಮುಂದೆ ಜನ ಕ್ಯೂ ನಿಂತು ಮದ್ಯ ಖರೀದಿಸುವುದು ಸಾಮಾನ್ಯವಾಗಿತ್ತು. ಹಾಗೆಯೇ ತರಿಕೇಯ ವ್ಯಕ್ತಿ ಕೂಡ ಮದ್ಯವನ್ನು ಖರೀದಿಸಿ ಮನೆಗೆ ಕೊಂಡು ಹೋಗುವುದನ್ನು ಬಿಟ್ಟು ದಾರಿ ಮಧ್ಯೆಯೇ ಕುಡಿದು ಬ್ಯಾಲೆನ್ಸ್ ತಪ್ಪಿ ಕೊನೆಗೆ ರಸ್ತೆಯಲ್ಲೇ ಬಿದ್ದುಕೊಂಡ ಫೋಟೊಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.


Spread the love