ಚಿಕ್ಕಮಗಳೂರು: 80 ಅಡಿ ಕಂದಕಕ್ಕೆ ಉರುಳಿದ ಕಾರು, ಸ್ಥಳದಲ್ಲೇ ಬಂಟ್ವಾಳ ಮೂಲದ ನಾಲ್ವರ ಸಾವು

Spread the love

ಚಿಕ್ಕಮಗಳೂರು: 80 ಅಡಿ ಕಂದಕಕ್ಕೆ ಉರುಳಿದ ಕಾರು, ಸ್ಥಳದಲ್ಲೇ ಬಂಟ್ವಾಳ ಮೂಲದ ನಾಲ್ವರ ಸಾವು

ಚಿಕ್ಕಮಗಳೂರು: 80 ಅಡಿಯ ಕಂದಕಕ್ಕೆ ವ್ಯಾಗನಾರ್ ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿದ್ದಾರೆ.

ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹಿರೇಬೈಲು ಗ್ರಾಮದ ಬಳಿ ಘಟನೆ ನಡೆದಿದ್ದು, ವಿಶ್ವನಾಥ್ (55), ಪುಪ್ಪಾವತಿ (48), ರಾಹುಲ್ (58), ಮಮತ (51) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ದಕ್ಷಿಣಕನ್ನಡ ಜಿಲ್ಲೆ ಬಂಟ್ವಾಳ ಮೂಲದವರಾಗಿದ್ದು, ಯಕ್ಷಗಾನವನ್ನು ನೋಡಿ ಬರುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಕಳಸ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love