ಚಿಟ್ ಫಂಡ್ ಹಣ ವಂಚನೆ – ಕಾನೂನು ವಿದ್ಯಾರ್ಥಿಯ ಅಪಹರಣ

Spread the love

ಚಿಟ್ ಫಂಡ್ ಹಣ ವಂಚನೆ – ಕಾನೂನು ವಿದ್ಯಾರ್ಥಿಯ ಅಪಹರಣ

ಉಡುಪಿ: ನಗರದ ಉದ್ಯಮಿಯೋರ್ವರಿಗೆ ಚಿಟ್ ಫಂಡ್ ಮೂಲಕ ಹಣ ವಂಚಿಸಿದ ಯುವ ಕಾನೂನು ವಿದ್ಯಾರ್ಥಿಯೋರ್ವನನ್ನು ಅಪಹರಿಸಿದ ಘಟನೆ ಉಡುಪಿ ಪಣಿಯಾಡಿಯಲ್ಲಿ ಗುರುವಾರ ವರದಿಯಾಗಿದೆ.

ಅಪಹರಣಕ್ಕೊಳಗಾದ ವಿದ್ಯಾರ್ಥಿಯನ್ನು ಉಡುಪಿ ವೈಕುಂಠ ಬಾಳಿಗಾ ಕಾಲೇಜಿನ ಕಾನೂನು ವಿದ್ಯಾರ್ಥಿ ವಿಜಯ್ ಶೆಟ್ಟಿ ಎಂದು ಗುರುತಿಸಲಾಗಿದೆ.

ಮೂಲಗಳ ಪ್ರಕಾರ ವಿದ್ಯಾರ್ಥಿಯು ಬೆಳಗಾಂನಲ್ಲಿ ಕಲಿಯುತ್ತಿದ್ದ ವೇಳೆಯಲ್ಲಿ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಉಡುಪಿ ಮೂಲದ ಉದ್ಯಮಿಯಿಂದ ಸುಮಾರು ರೂ 40 ಲಕ್ಷದಷ್ಟು ಹಣವನ್ನು ಪಡೆದುಕೊಂಡಿದ್ದು, ವಾಪಾಸು ನೀಡದೆ ಸತಾಯಿಸುತ್ತಿದ್ದ ಎನ್ನಲಾಗಿದೆ. ಈತನಿಗೆ ಹಲವು ಬಾರಿ ಫೋನ್ ಮೂಲಕ ಸಂಪರ್ಕಕ್ಕೆ ಪ್ರಯತ್ನಿಸದರೂ ಕೂಡ ತಪ್ಪಿಸಿಕೊಳ್ಳುತ್ತಿದ್ದ ಇದರಿಂದ ಆತನನ್ನು ಅಪಹರಿಸುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ. ಗುರುವಾರ ಮಧ್ಯಾಹ್ನದ ವೇಳೆಗೆ ಆತನು ವಾಸವಾಗಿರುವ ರೂಮ್ ಪತ್ತೆ ಹಚ್ಚಿ ಬಂದ ವ್ಯಕ್ತಿಯೊಬ್ಬ ಪರಿಚಯಸ್ಥನಂತೆ ನಟಿಸಿ ಮನೆಯಿಂದ ಹೊರ ಕರೆದಿದ್ದು, ಮೊದಲೆ ತಯಾರಾಗಿದ್ದ ಕಾರಿನಲ್ಲಿ ಅಪಹರಿಸಲಾಗಿದೆ ಎನ್ನಲಾಗಿದೆ.

ಘಟನೆಯ ಕುರಿತು ಅಧಿಕೃತ ದೂರು ಇದುವರೆಗೆ ದಾಖಲಾಗಿಲ್ಲ ಆದರೂ ಉಡುಪಿ ನಗರ ಪೋಲಿಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ.


Spread the love