ಚಿಣ್ಣರ ಚಿಲಿಪಿಲಿಯಲ್ಲಿ ಸಾಧಕ ಮಕ್ಕಳ ಸನ್ಮಾನ

Spread the love

ಮಂಗಳೂರು: ಅರೆಹೊಳೆ ಪ್ರತಿಷ್ಠಾನ ಹಾಗೂ ಲಿಯೋ ಕ್ಲಬ್ ಕದ್ರಿ ಹಿಲ್ಸ್ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದಲ್ಲಿ ವಿವಿಧ ರಂಗಗಳಲ್ಲಿ ವಿಶೇಷ ಸಾಧನೆ ಮಾಡಿದ ಮಕ್ಕಳನ್ನು ಸನ್ಮಾನಿಸಲಾಯಿತು.

Sadhaka_Sanmana1

 ಕರಾಟೆ ಹಾಗೂ ನೃತ್ಯದಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ, ಕೆನರಾ ಶಾಲೆ ಉರ್ವದ ವಿದ್ಯಾರ್ಥಿನಿ ರುಶಾಲಿ ಸಾಲಿಯಾನ್, ಚಿತ್ರಕಲೆ, ಕೀಬೋರ್ಡ್ ಹಾಗೂ ಗಾಯನದಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಎಸ್‍ಡಿಎಂ ಬಿಸಿನೆಸ್ ಕಾಲೇಜಿನ  ಶಬರಿ ಗಾಣಿಗ ಹಾಗೂ ಪೆನ್ಸಿಲ್ ಸ್ಕೆಚ್ ಕಲಾವಿದೆ , ಶ್ರೀದೇವಿ ಕಾಲೇಜಿನ ಸುಹಾನಿ ಸಾಮಂತ್ ಅವರನ್ನು ಸನ್ಮಾನಿಸಲಾಯಿತು.

ಲಿಯೋ ಕ್ಲಬ್ ಕದ್ರಿ ಹಿಲ್ಸ್ ಅಧ್ಯಕ್ಷೆ ಶ್ವೇತಾ ಅರೆಹೊಳೆ, ಲಯನ್ಸ್ ಗವರ್ನರ್ ಮಂಜುನಾಥ ಮೂರ್ತಿ, ಲೇಖಕ ರಘು ಇಡ್ಕಿದು, ಡಾ.ಧನಂಜಯ ಕುಂಬ್ಳೆ, ಶ್ರೀಧರ್, ಎನ್ ಟಿ ರಾಜಾ, ಕೇಶವ ಭಟ್, ಪ್ರಜ್ಞಾ ಭಂಡಾರಿ, ಪಲ್ಲವಿ ಪೈ, ಸಂಜಯ ಸುವರ್ಣ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love