ಚುನಾವಣಾ ದೂರು/ಸಲಹೆ ಸ್ವೀಕಾರ – 24ಗಂಟೆಗಳ ನಿಯಂತ್ರಣ ಕೊಠಡಿ

Spread the love

ಚುನಾವಣಾ ದೂರು/ಸಲಹೆ ಸ್ವೀಕಾರ – 24ಗಂಟೆಗಳ ನಿಯಂತ್ರಣ ಕೊಠಡಿ

ಮಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ರ ಪ್ರಯುಕ್ತ ಸಾರ್ವಜನಿಕರಿಗೆ ಮಾಹಿತಿ ನೀಡುವ ಬಗ್ಗೆ ಹಾಗೂ ಸಾರ್ವಜನಿಕರ ದೂರು/ ಸಲಹೆ ಸ್ವೀಕರಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿಯ 2ನೇ ಮಹಡಿಯಲ್ಲಿ 24ಗಂಟೆಗಳಲ್ಲಿಯೂ ಕಾರ್ಯಾಚರಿಸುವ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ.

ಚುನಾವಣೆ ಸಂಬಂಧಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟ ಯಾವುದೇ ದೂರುಗಳನ್ನು ಇಲ್ಲಿ ನೀಡಬಹುದು ಅಥವಾ ಚುನಾವಣೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ. ಚುನಾವಣೆಯನ್ನು ಮುಕ್ತ ಹಾಗೂ ಸುಸೂತ್ರವಾಗಿ ನಡೆಸಲು ಸಲಹೆ ಸೂಚನೆಗಳನ್ನು ನೀಡಲು ನಿಯಂತ್ರಣ ಕೊಠಡಿಯ ದೂರವಾಣಿಸಂಖ್ಯೆ 0824-2420002, 1800-4252099 ಸಂಪರ್ಕಿಸಲು ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟನೆ ತಿಳಿಸಿದೆ.


Spread the love