ಜನತಾ ಕರ್ಫ್ಯೂ : ಬಾಲ್ಕನಿ, ಕಿಟಕಿಗಳ ಮೂಲಕ ಹೊರಬಂದು ಚಪ್ಪಾಳೆ ತಟ್ಟಿ ಕೃತಜ್ಞತೆ ಅರ್ಪಿಸಿದ ಉಡುಪಿ ಜನತೆ

ಜನತಾ ಕರ್ಫ್ಯೂ : ಬಾಲ್ಕನಿ, ಕಿಟಕಿಗಳ ಮೂಲಕ ಹೊರಬಂದು ಚಪ್ಪಾಳೆ ತಟ್ಟಿ ಕೃತಜ್ಞತೆ ಅರ್ಪಿಸಿದ ಉಡುಪಿ ಜನತೆ

ಉಡುಪಿ: ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಸಂಜೆ ಉಡುಪಿಯ ನಾಗರಿಕರು ಸಂಜೆ 5 ಗಂಟೆಗೆ ಸರಿಯಾಗಿ ಕೊರೊನಾ ತಡೆಯುವಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಚಪ್ಪಾಳೆ ಮೂಲಕ ಅಭಿನಂದನೆ ಸಲ್ಲಿಸಿದರು.

ದೇಶಾದ್ಯಂತ ವ್ಯಾಪಿಸಿರುವ ಕೊರೋನಾ ಸೋಂಕು ತಡೆಯುವ ಉದ್ದೇಶದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಕರೆ ನೀಡಿದ್ದ ಜನತಾ ಕರ್ಪ್ಯೂಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಜನತೆ ಮನೆಯ ಬಾಲ್ಕನಿ, ಕಿಟಕಿಗಳ ಮೂಲಕ ಹೊರಬಂದು, ಸಾಂಕ್ರಾಮಿಕ ರೋಗದ ವಿರುದ್ಧದ ಸೇವೆಯಲ್ಲಿ ತೊಡಗಿರುವವರಿಗೆ ಅಭಿನಂದನೆ ಸಲ್ಲಿಸಿದ್ದಾರೆ

ನಗರದ ವಸತಿ ಸಮುಚ್ಚಯಗಳಲ್ಲಿ ಇರುವ ನಿವಾಸಿ ನೂರಾರು ಸಂಖ್ಯೆಯಲ್ಲಿ ತಮ್ಮ ತಮ್ಮ ಮನೆಗಳ ಬಾಲ್ಕನಿಗಳ ಮುಂದೆ ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ಸಲ್ಲಿಸಲಿದರು.

ವಸತಿ ಸಮುಚ್ಚಯದ ನಿವಾಸಿಗಳಿಂದ ಚಪ್ಪಾಳೆ, ಶಂಖ, ಕೊಳಲು ಬಾರಿಸಿ ಸುಮಾರು ಐದು ನಿಮಿಷಗಳ ಕಾಲ ವೈದ್ಯರು, ಅಧಿಕಾರಿಗಳು, ನರ್ಸ್ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು.

Leave a Reply

  Subscribe  
Notify of