ಜನಾರ್ದನ ಪೂಜಾರಿ ಆಶೀರ್ವಾದ ಪಡೆದ ರಮಾನಾಥ್ ರೈ; ಮನತುಂಬಿ ಹರಸಿದ ಕಾಂಗ್ರೆಸ್ ದಿಗ್ಗಜ

Spread the love

ಜನಾರ್ದನ ಪೂಜಾರಿ ಆಶೀರ್ವಾದ ಪಡೆದ ರಮಾನಾಥ್ ರೈ; ಮನತುಂಬಿ ಹರಸಿದ ಕಾಂಗ್ರೆಸ್ ದಿಗ್ಗಜ

ಬಂಟ್ವಾಳ: ಮಹತ್ವದ ವಿದ್ಯಮಾನವೊಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕಾಂಗ್ರೆಸ್ ಹಿರಿಯ ನಾಯಕ ಬಿ.ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಜನಾರ್ದನ ಪೂಜಾರಿ ಅವರ ಕಣ್ಣೀರು ಪ್ರಕರಣ ಹಾಗೂ ಅದಾದ ಬಳಿಕ ಪೂಜಾರಿಯವರಿಗೆ ರೈ ಅವರ ವಿರುದ್ಧ ಅಸಮಾಧಾನ ಇದೆ ಎಂಬ ಮಾತುಗಳು ಕೆಲ ವೇದಿಕೆಗಳಲ್ಲಿ ಕೇಳಿಬಂದಿದ್ದು, ಹಾಗೂ ಖುದ್ದು ಜನಾರ್ದನ ಪೂಜಾರಿ ಅವರೇ ಕಾಂಗ್ರೆಸ್ ಸರಕಾರದ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದು ಕಂಡುಬಂದಿತ್ತು.

19 ರಂದು ನಾಮಪತ್ರ ಸಲ್ಲಿಸಲಿರುವ ಹಿನ್ನೆಲೆಯಲ್ಲಿ ರಮಾನಾಥ ರೈ ಅವರು ಇತರ ನಾಯಕರೊಂದಿಗೆ ಪೂಜಾರಿ ಅವರ ನಿವಾಸಕ್ಕೆ ಬುಧವಾರ ಬೆಳಗ್ಗೆ ತೆರಳಿದರು. ಈ ಸಂದರ್ಭ ರಮಾನಾಥ ರೈ ಅವರು ಪೂಜಾರಿ ಆಶೀರ್ವಾದ ಪಡೆದರು.

 

ರಮಾನಾಥ ರೈ ಅವರಿಗೆ ದೇವರ ದಯೆ ಇದೆ, ಬಂಟ್ವಾಳ ಜನತೆಯ ಆಶೀರ್ವಾದ ಇದೆ ಎಂದು ಹೇಳಿದ ಪೂಜಾರಿ, ಕಾಂಗ್ರೆಸ್ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ. ರಮಾನಾಥ ರೈ ಅತ್ಯಧಿಕ ಅಂತರದ ಮತಗಳಿಂದ ವಿಜಯಿಯಾಗುತ್ತಾರೆ, ದೇಶದಲ್ಲಿ ಕಾಂಗ್ರೆಸ್ ಗೆ ಅಳಿವಿಲ್ಲ ಎಂದು ಹೇಳಿದರು.

ಬಳಿಕ ರೈ ಯವರನ್ನು ಅವರ ವಾಹನದ ತನಕ ಬೀಳ್ಕೊಟ್ಟು ಪೂಜಾರಿ ಶುಭ ಹಾರೈಸಿದರು.
ಬಂಟ್ವಾಳ ಕ್ಷೇತ್ರದಲ್ಲಿ ಈಗಾಗಲೇ ಚುನಾವಣಾ ಸಮರಕ್ಕೆ ಆಖಾಡ ಸಿದ್ಧವಾಗಿದ್ದು, ಬಿಜೆಪಿಯ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಕಾಂಗ್ರೆಸ್ ನ ರಮಾನಾಥ ರೈ ಸಮರ ಸನ್ನದ್ಧರಾಗಿದ್ದಾರೆ.


Spread the love

1 Comment

  1. Ramu should practice touching his toes 20 times every morning. That will keep him fit. Nagu from beeja mantra paksha could also do some jugalbandi for that. People are taken for a ride in this hot weather.

Comments are closed.