ಜಪ್ಪಿನಮೊಗರು ಕಾಂಕ್ರೀಟ್ ರಸ್ತೆ ಲೋಕಾರ್ಪಣೆ

ಜಪ್ಪಿನಮೊಗರು ಕಾಂಕ್ರೀಟ್ ರಸ್ತೆ ಲೋಕಾರ್ಪಣೆ

ಮಂಗಳೂರು: ಮಹಾನಗರ ಪಾಲಿಕೆಯ ವ್ಯಾಪ್ತಿಯ 54 ನೇ ಜಪ್ಪಿನಮೊಗರು ವಾರ್ಡಿನ ಆಡಂಕುದ್ರು ಸೇತುವೆ ಬಳಿಯಿಂದ ಆಡಂಕುದ್ರು ಚಾಪೆಲ್ ವರೆಗಿನ ಕಾಂಕ್ರೀಟಿಕರಣಗೊಂಡ ನೂತನ ರಸ್ತೆಯನ್ನು ಪೆರ್ಮನೂರು ಇಗರ್ಜಿಯ ಧರ್ಮಗುರುಗಳಾಗಿರುವ ಡಾ| ಜೆ.ಬಿ. ಸಲ್ದಾನಾ ಹಾಗೂ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಈ ಪರಿಸರದ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದ್ದ ಕಾಂಕ್ರೀಟ್ ರಸ್ತೆಯನ್ನು ಲೋಕಾರ್ಪಣೆಗೊಳಿಸುವ ಕಾರ್ಯಕ್ರಮದಲ್ಲಿ ಪೆರ್ಮನೂರು ಇಗರ್ಜಿಯ ಉಪಾಧ್ಯಕ್ಷರಾದ ಮೆಲ್ವಿನ್ ಪಿ ಡಿಸೋಜಾ, ಸ್ಥಳೀಯ ಮನಪಾ ಮಾಜಿ ಸದಸ್ಯ ಜೆ ಸುರೇಂದ್ರ, ಪೆರ್ಮನೂರು ಕೆಥೊಲಿಕ್ ಸಭಾ ಅಧ್ಯಕ್ಷರಾದ ಡೊಲ್ಫಿ ಡಿಸೋಜಾ, ಹೋಲಿ ರೋಜಾರಿಯೋ ಸಮಿತಿ ಜಾಗದ ಸಮಿತಿ ಅಧ್ಯಕ್ಷ ಐವನ್ ಡಿಸೋಜಾ, ವಾರ್ಡ್ ಗುರ್ಕಾರರಾದ ಶ್ರೀಮತಿ ಮೋಲಿ ಡಿಸೋಜಾ, ಓಸ್ಲಾಲ್ಡ್ ಡಿಸೋಜಾ, ಜೋಸೆಫ್ ಮೊಂತೆರೋ, ಆಸ್ಕರ್ ಲಿಯೋ ಡಿಸೋಜಾ, ಸಿಪ್ರಿಯನ್ ಡಿಸೋಜಾ, ಆಸ್ಟಿನ್ ಮೊಂತೆರೋ ಉಳಿಯಾ, ಸ್ಟೀವನ್ ಡಿಕುನ್ಹಾ, ಓಸ್ವಾಲ್ ಡಿಸೋಜಾ, ಸುರೇಶ್ ಡಿಸೋಜಾ, ಉದಯ್ ಡಿಸೋಜಾ, ಸಂತೋಷ್ ಡಿಸೋಜಾ, ಸ್ಟೀವನ್ ಡಿಸೋಜಾ, ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ, ಮಧು ಕಂಬಿಸ್ತಾನ, ಪ್ರವೀಣ್ ತಾಂಡೋಲಿಗೆ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.