ಜಯಂಟ್ಸ್ ಗ್ರೂಪ್ ಆಫ್ ಉಡುಪಿ: ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಜಯಂಟ್ಸ್ ಗ್ರೂಪ್ ಆಫ್ ಉಡುಪಿ: ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮ

ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಉಡುಪಿ ವತಿಯಿಂದ ಜಿಲ್ಲಾ ಮಹಿಳಾ ಪೊಲೀಸರಿಗೆ ಮೂಳೆ ಸಾಂದ್ರತೆ ತಪಾಸಣಾ ಕಾರ್ಯಕ್ರಮವು ಉಡುಪಿ ಚಂದು ಮೈದಾನದಲ್ಲಿರುವ ಡಿಎಆರ್ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ಉಡುಪಿ ಎಸ್ಪಿ ನಿಶಾ ಜೇಮ್ಸ್ ಕಾರ್ಯಕ್ರಮ ಉದ್ಘಾಟಿಸಿ, ಮಹಿಳೆಯರಿಗೆ ಮೂಳೆ ಸಾಂದ್ರತೆಯ ಅಗತ್ಯತೆಯನ್ನು ವಿವರಿಸಿದರು.

ಜಯಂಟ್ಸ್ ಉಡುಪಿ ಅಧ್ಯಕ್ಷ ಬಿ.ಜಿ ಲಕ್ಷ್ಮೀಕಾಂತ್ ಬೆಸ್ಕೂರ್ ಸ್ವಾಗತಿಸಿ, ಜಯಂಟ್ಸ್ ಗ್ರೂಪ್ ಬೆಳೆದು ಬಂದ ದಾರಿಯನ್ನು ವಿವರಿಸಿದರು. ಜಯಂಟ್ಸ್ ಗ್ರೂಪ್‌ನ ಸೆಂಟ್ರಲ್ ಕಮಿಟಿ ಸದಸ್ಯ ಜ| ದಿನಕರ್ ಅಮಿನ್, ಫೆಡರೇಷನ್ ಆಫಿಸರ್ ಜ| ತೇಜೇಶ್ವರ್ ರಾವ್, ಯುನಿಟ್ ಡೈರೆಕ್ಟರ್ ಜ|ರಮೇಶ್ ಪೂಜಾರಿ ಮಾತನಾಡಿದರು.

ಉಪಾಧ್ಯಕ್ಷ ಜ|ಇಕ್ಬಾಲ್ ಮನ್ನಾ, ಡೈರೆಕ್ಟರ್ ಅಡ್ಮಿನಿಸ್ಟ್ರೇಶನ್ ಜ| ಯಶ್ವಂತ್ ಸಾಲಿಯಾನ್, ಪೊಲೀಸ್ ಇನ್ಸ್‌ಪೆಕ್ಟರ್ ರಾಘವೇಂದ್ರ, ಜಯಂಟ್ಸ್ ಪೂರ್ವಾಧ್ಯಕ್ಷರಾದ ಜ| ಚಿದಾನಂದ ಪೈ, ಜ| ದೇವದಾಸ್ ಕಾಮತ್, ಜ| ಉಷಾ ರಮೇಶ್, ಜ| ಜಗದೀಶ್ ಅಮೀನ್, ಜ| ರಾಜೇಶ್ ಸಾಲಿಯಾನ್ , ಜ| ವಿನ್ಸೆಂಟ್ ಸಾಲ್ಡಾನ, ಜ| ಪ್ರಭಾಕರ್ ಬಂಗೇರ್ ಮುಂತಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆಯ ಮಹಿಳಾ ಪೊಲೀಸರು ಈ ಕಾರ್ಯಕ್ರಮದ ಪ್ರಯೋಜನ ಪಡೆದರು. ಜ| ಉಷಾ ರಮೇಶ್ ವಂದಿಸಿದರು.

Leave a Reply

  Subscribe  
Notify of