ಜಾನುವಾರು ಸಾಗಣೆ: 7 ಜನರ ಬಂಧನ; 2 ವಾಹನ ವಶ

ಜಾನುವಾರು ಸಾಗಣೆ: 7 ಜನರ ಬಂಧನ; 2 ವಾಹನ ವಶ

ಬೆಳ್ತಂಗಡಿ: ‘ಮಹಾರಾಷ್ಟ್ರದ ಕೊಲ್ಲಾಪು ರದಿಂದ ಕೇರಳದ ಕಾಸರಗೋಡು ಜಿಲ್ಲೆಗೆ ಮಾಂಸಕ್ಕಾಗಿ ಸಾಗಿಸು ಮಾಡುತ್ತಿದ್ದ 15ಕೋಣ, 2ಎಮ್ಮೆ ಸಾಗಾಟ ಪ್ರಕರಣವನ್ನು ಬಂಟ್ವಾಳ ಉಪವಿಭಾಗದ ಎಎಸ್‍ಪಿ ಸೈದುಲ್ಲಾ ಅದಾವತ್ ನೇತೃತ್ವದಲ್ಲಿ ಪಣಕಜೆ ಸಬರಬೈಲು ಬಳಿ ಶನಿವಾರ ಮುಂಜಾನೆ ಪತ್ತೆಹಚ್ಚಿ 7ಜನರನ್ನು ಬಂಧಿಸಿ 2ವಾಹನವನ್ನು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದೆ.

ಕಂಟೇನರ್ ವಾಹನದ ಚಾಲಕ ವೇಣೂರು ಮೂಡುಕೋಡಿ ನಿವಾಸಿ ಹೈದರ್(39) ಸಹಚಾಲಕ ಕಾಸರಗೊಡು ಆಲಂಪಾಡಿ ನಿವಾಸಿ ಅಬ್ದುಲ್ ರಹಿಮಾನ್ (34), ಹಾಸನ ಬೇಲೂರು ನಿವಾಸಿ ಮಂಜೇಗೌಡ (35), ಕಾಸರಗೋಡು ವಿದ್ಯಾನಗರದ ನಿವಾಸಿ ಬಾಬು (58) ಬಂಧಿತರು. ಲಾರಿಗೆ ಬೆಂಗಾವಲಾಗಿ ಆಲ್ಟೋ ಕಾರ್‌ನಲ್ಲಿ ಹೋಗುತ್ತಿದ್ದ ಕಾಸರಗೋಡು ನಿವಾಸಿ ಅಬ್ದುಲ್ ರಹಿಮಾನ್ (20), ಕಾಸರಗೋಡು ಆಲಂಪಾಡಿ ನಿವಾಸಿ ಮಹಮ್ಮದ್ ಮುಸ್ತಾಫ (20), ಇದರ ಚಾಲಕ ಕಾಸರಗೋಡು ಆಲಂಪಾಡಿ ನಿವಾಸಿ ಮಹಮ್ಮದ್ ಅಕ್ಬರ್ (27) ಎಂಬವರನ್ನು ಬಂಧಿಸಲಾಗಿದೆ. ₹ 9ಲಕ್ಷದ ವಾಹನ ಸುಮಾರು ₹15ಲಕ್ಷ ಬೆಲೆಯ ಎಮ್ಮೆ ಹಾಗೂ ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಸಂದೇಶ ಪಿ.ಜಿ., ಎಸ್‍ಐ ರವಿ ಬಿ.ಎಸ್, ಧರ್ಮಸ್ಥಳ ಎಸ್‍ಐ ಅವಿನಾಶ್ , ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.