ಜಾರ್ಖಂಡ್ ಶಾಸಕರ ಟ್ವೀಟ್ ಮನವಿಗೆ ಸ್ಪಂದಿಸಿದ ಉಡುಪಿ ಜಿಲ್ಲಾಡಳಿತ – ಏಳು ಕಾರ್ಮಿಕರಿಗೆ ತುರ್ತು ಪಡಿತರ ವಿತರಣೆ
ಉಡುಪಿ: ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವಿಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ 7 ಕಾರ್ಮಿಕರಿಗೆ ನೆರವು ನೀಡುವಂತೆ ಜಾರ್ಖಂಡ್ ಶಾಸಕರೊಬ್ಬರ ಟ್ವೀಟ್ ಗೆ ಉಡುಪಿ ಜಿಲ್ಲಾಡಳಿತ ಶೀಘ್ರ ಸ್ಪಂದಿಸಿ ಮಾನವೀಯತೆ ಮರೆದಿದ್ದಾರೆ.

ಜಾರ್ಖಂಡ್ ಮೂಲದ ವಲಸೆ ಕಾರ್ಮಿಕರಾದ ಅಕ್ತರ್ ಅನ್ಸಾರಿ, ಇಸ್ಮಾಯಿಲ್ ಅನ್ಸಾರಿ, ರಿಯಾಝ್ ಅನ್ಸಾರಿ, ಸಭಾನ್ ಅನ್ಸಾರಿ, ಚಿಂತಾವಾನ್ ಸಿಂಗ್, ಫರೀದ್ ಅನ್ಸಾರಿ ಹಾಗೂ ಅಝೀಜ್ ಅನ್ಸಾರಿ ಅವರು ಕಾಪುವಿನಲ್ಲಿ ವಾಸವಿದ್ದು, ಲಾಕ್ ಡೌನ್ ಹಿನ್ನಲೆಯಲ್ಲಿ ಕೆಲಸವೂ ಇಲ್ಲದೆ ಊಟಕ್ಕಾಗಿ ಸೂಕ್ತ ಪಡಿತರ ವ್ಯವಸ್ಥೆ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದ ವಿಚಾರ ಜಾರ್ಖಂಡ್ ಶಾಸಕರಾದ ಡಾ|ಇರ್ಫಾನ್ ಅನ್ಸಾರಿ ಅವರಿಗೆ ತಿಳಿದು ಬಂದಿದ್ದು ಅವರು ಉಡುಪಿ ಜಿಲ್ಲಾ ಕಾಂಗ್ರೆಸ್ ಟ್ವೀಟ್ಟರ್ ಪೇಜಿಗೆ ಟ್ವೀಟ್ ಮಾಡಿದ್ದರು.
ಇದರ ಮಾಹಿತಿ ಪಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಟ್ವೀಟ್ಟರ್ ಹ್ಯಾಂಡಲ್ ತಂಡ ಜಿಲ್ಲಾಡಳಿತದ ಗಮನಕ್ಕೆ ತಂದಿದ್ದು ಇದಕ್ಕೆ ಜಿಲ್ಲಾಡಳೀತ ಕೂಡಲೇ ಸ್ಪಂದಿಸಿ ಕಾಪು ತಹಶೀಲ್ದಾರ್ ಐಸಾಕ್ ಅಹ್ಮದ್ ಮೂಲಕ ಏಳು ಮಂದಿ ಕಾರ್ಮಿಕರನ್ನು ಪತ್ತೆ ಹಚ್ಚಿ ಅವರಿಗೆ ಅಗತ್ಯ ಪಡಿತರವನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.













