ಜಾಲತಾಣದಲ್ಲಿ ದೇವೆಗೌಡರ ಅವಹೇಳನ; ಕ್ರಮಕ್ಕೆ ಯುವ ಜೆಡಿಎಸ್ ಆಗ್ರಹ ಮಂಗಳೂರು:

Spread the love

ಜಾಲತಾಣದಲ್ಲಿ ದೇವೆಗೌಡರ ಅವಹೇಳನ; ಕ್ರಮಕ್ಕೆ ಯುವ ಜೆಡಿಎಸ್ ಆಗ್ರಹ

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ಪರಮೋಚ್ಛ ನಾಯಕ ಎಚ್. ಡಿ.ದೇವೆಗೌಡ ಅವರನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯವ ಜನತಾದಳ (ಜಾತ್ಯಾತೀತ) ವತಿಯಿಂದ ನಗರ ಪೋಲಿಸ್ ಕಮೀಷನರ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ದೇಶ ನಾಡು ನುಡಿಗೆ ಅಪ್ರತಿಮ ಸೇವೆ ಸಲ್ಲಿಸಿರುವ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಿಯ ಅಧ್ಯಕ್ಷರಾದ ಎಚ್ ಡಿ ದೇವೆಗೌಡರಿಗೆ ಸಾಮಾಜಿಕ ಜಾಲತಾಣದಲ್ಲಿ ದೇಶದ್ರೋಹಿ ಎಂದು ಯಾವುದೇ ಕಾರಣವಿಲ್ಲದೆ ನಿಂದಿಸುವವರ ವಿರುದ್ದ ಸೂಕ್ತ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು  ನಗರ ಪೋಲಿಸ್ ಆಯುಕ್ತರಿಗೆ ಆಗ್ರಹಿಸಿದರು.

ಈ ವೇಳೆ ಜೆಡಿಎಸ್ ರಾಜ್ಯ ಯುವ ಮುಖಂಡರಾದ ಶ್ರೀನಾಥ್ ರೈ, ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಗೌಡ, ಜಿಲ್ಲಾ ಯುವ ಜೆಡಿಎಸ್ ಕಾರ್ಯದರ್ಶಿ ಫೈಝಲ್, ತೇಜಸ್ ಶೆಟ್ಟಿ, ಡೆಸ್ಮಂಡ್, ಸಿನಾನ್, ತೇಜಸ್ ನಾಯಕ್ ಉಪಸ್ಥಿತರಿದ್ದರು.


Spread the love