ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ

Spread the love

ಜಿಲ್ಲಾಧಿಕಾರಿ ಮೇಲಿನ ಹಲ್ಲೆ ಖಂಡಿಸಿ ಪೆರಂಪಳ್ಳಿ ಕ್ರೈಸ್ತ ಮಹಿಳಾ ಸಂಘಟನೆಯಿಂದ ಎಸ್ಪಿಗೆ ಮನವಿ

ಉಡುಪಿ: ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ, ಕುಂದಾಪುರ ಉಪವಿಭಾಗಾಧಿಕಾರಿ ಹಾಗೂ ಇತರರ ಮೇಲೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಕುರಿತು ಅನೀರೀಕ್ಷಿತ ಧಾಳಿ ನಡೆಸಿದ ಸಂದರ್ಭದಲ್ಲಿ ದುಷ್ಕರ್ಮಿಗಳು ಅವರ ಮೇಲೆ ಕೊಲೆ ಯತ್ನ ಹಾಗೂ ಹಲ್ಲೆ ನಡೆಸಲು ಯತ್ನಿಸಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಪೆರಂಪಳ್ಳಿ ಫಾತಿಮಾ ದೇವಾಲಯದ ಕ್ರೈಸ್ತ ಸ್ತ್ರೀ ಸಂಘಟನೆಯ ಸದಸ್ಯರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಕುಂದಾಪುರ ತಾಲೂಕಿನ ಕಂಡ್ಲೂರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದ ಪ್ರದೇಶಗಳಿಗೆ ಧಾಳಿ ನಡೆಸುತ್ತಿದ್ದ ವೇಳೆ ಜಿಲ್ಲಾಧಿಕಾರಿ, ಅವರ ಗನ್ ಮ್ಯಾನ್, ಉಪವಿಭಾಗಾಧಿಕಾರಿ, ಹಾಗೂ ಇತರರ ಮೇಲೆ ನಡೆದ ಧಾಳಿ ಖಂಡನೀಯ. ದಕ್ಷ ಅಧಿಕಾರಗಳ ಮೇಲೆ ಹಲ್ಲೆ ನಡೆಸಿದ ಎಲ್ಲಾ ಮರಳು ಮಾಫಿಯಾದವರನ್ನು ಹಾಗೂ ಅದರಲ್ಲಿ ಶಾಮೀಲಾದ ಎಲ್ಲರನ್ನೂ ಬಂಧಿಸಿ ಅವರ ಮೇಳೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಸಂಘಟನೆಯ ಸದಸ್ಯರು ಪೋಲಿಸ್ ವರಿಷ್ಠಾಧಿಕಾರಿಯವರನ್ನು ಒತ್ತಾಯಿಸಿದರು.

ನಿಯೋಗದಲ್ಲಿ ಸಂಘಟನೆಯ ಅಧ್ಯಕ್ಷೆ ಲೀನಾ ಡಿಸೋಜ, ಕಾರ್ಯದರ್ಶಿ ಫಾವೊಸ್ತಿನ್ ಡಿಸೋಜ, ಕೋಶಾಧಿಕಾರಿ ಐರಿನ್ ಡಿಸೋಜ, ಮೆಲಿಟಾ ಡಿಸೋಜಾ ಹಾಗೂ ಡೆಲ್ಫಿನ್ ಡಿಸೋಜಾ ಹಾಗೂ ಇತರರು ಉಪಸ್ಥಿರಿದ್ದರು.


Spread the love