ಜಿಲ್ಲಾ ಆಸ್ಪತ್ರೆಯಾಗಿ ಉಡುಪಿ ಆಸ್ಪತ್ರೆ – ಸಚಿವ ಪ್ರಮೋದ್ ಮಧ್ವರಾಜ್

Spread the love

ಜಿಲ್ಲಾ ಆಸ್ಪತ್ರೆಯಾಗಿ ಉಡುಪಿ ಆಸ್ಪತ್ರೆ – ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ : ಉಡುಪಿ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಸರಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಅವರು ಶುಕ್ರವಾರ , ಜಿಲ್ಲಾ ಪಂಚಾಯತ್ ಉಡುಪಿ, ಆಯುಷ್ ಇಲಾಖೆ ಉಡುಪಿ ಇವರ ವತಿಯಿಂದ ಧನ್ವಂತರಿ ಜಯಂತಿಯ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಆಯುರ್ವೇದ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಉಡುಪಿ ಜಿಲ್ಲೆ 1998 ರಲ್ಲಿ ಜಿಲ್ಲೆಯಾಗಿದ್ದರೂ ಸಹ ಇಲ್ಲಿನ ಆಸ್ಪತ್ರೆಯು ತಾಲೂಕು ಆಸ್ಪತ್ರೆಯಾಗಿಯೇ ಇತ್ತು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದು, ಪ್ರಸ್ತುತ ಮಾನ್ಯ ಮುಖ್ಯಮಂತ್ರಿಗಳು ಈ ಆಸ್ಪತ್ರೆಯನ್ನು ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆರಿಸಲು ಆದೇಶ ನೀಡಿದ್ದು, ಶೀಘ್ರದಲ್ಲಿ ಈ ಆಸ್ಪತ್ರೆಗೆ ಎಲ್ಲಾ ವಿಭಾಗದ ವೈದ್ಯರು , ಹೆಚ್ಚಿನ ಸಂಖ್ಯೆಯ ಶುಶ್ರೂಶಕರು, ತಂತ್ರಜ್ಞರುಗಳ ನೇಮಕಾತಿ, ತಾಂತ್ರಿಕ ಉಪಕರಣಗಳು ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಬೆಡ್ ಗಳ ಸಂಖ್ಯೆಯನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

image001world-ayurveda-day-udupi-20161028 image002world-ayurveda-day-udupi-20161028 image003world-ayurveda-day-udupi-20161028 image004world-ayurveda-day-udupi-20161028 image005world-ayurveda-day-udupi-20161028 image006world-ayurveda-day-udupi-20161028 image007world-ayurveda-day-udupi-20161028

ಸಾವಿರಾರು ವರ್ಷಗಳ ಇತಿಹಾಸ ಇರುವ ವೈದ್ಯಕೀಯ ಪದ್ದತಿ ಆರ್ಯುವೇದ ಮಾತ್ರ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಎಂದರೆ ಅದು ಆರ್ಯುವೇದ ಮಾತ್ರ, ರಾಮಾಯಣ ಮಹಾಭಾರತದ ಕಾಲದಲ್ಲೂ ಸಹ ಅನೇಕ ರೋಗಗಳನ್ನು ಆರ್ಯುವೇದ ಚಿಕಿತ್ಸೆಯ ಮೂಲಕವೇ ಗುಣಪಡಿಸಲಾಗುತ್ತಿತ್ತು, ಅಂದಿನ ಜನರ ಸರಾಸರಿ ಜೀವಿತಾವಧಿ 120 ವರ್ಷಗಳಾಗಿತ್ತು, ಆದರೆ ಪ್ರಸ್ತುತ ಕಲುಷಿತ ವಾತಾವರಣ, ನೀರು ಆಹಾರ ಪದ್ದತಿಯಿಂದ ಜೀವಿತಾವಧಿ 70 ವರ್ಷಗಳಿಗೆ ಇಳಿದಿದೆ.

ಹಿಂದಿನ ಆರ್ಯುವೇದ ಚಿಕಿತ್ಸಕರು ಹಲವು ರೋಗಗಳ ಚಿಕಿತ್ಸೆಯ ಗುಟ್ಟನ್ನು ಬಿಟ್ಟುಕೊಡದ ಕಾರಣ , ಪ್ರಸ್ತುತ ಆರ್ಯುವೇದದ ಚಿಕಿತ್ಸೆಯಲ್ಲಿ ಬಳಕೆಯಾಗುತ್ತಿರುವುದು ಶೇ.10 ಮಾತ್ರ, ಆರ್ಯುವೇದದಲ್ಲಿ ಎಲ್ಲ ರೋಗಗಳಿಗೂ ಚಿಕಿತ್ಸೆ ಇದೆ, ಮದುಮೇಹಕ್ಕೆ ಆರ್ಯುವೇದ ಚಿಕಿತ್ಸೆ ಅತ್ಯಂತ ಪರಿಣಮಕಾರಿಯಾದುದು, ಜನತೆ ಆರ್ಯುವೇದ ಚಿಕಿತ್ಸೆಯ ಪ್ರಯೋಜನ ಪಡೆಯುವಂತೆ ಸಚಿವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.9 ರಷ್ಟು ಜನ ಮಧುಮೇಹದಿಂದ ಬಳಲುತ್ತಿದ್ದಾರೆ, 2020 ರ ವೇಳೆಗೆ ಈ ಪ್ರಮಾಣ ಶೇ.13 ತಲುಪುವ ಸಾಧ್ಯತೆಯಿದ್ದು, ಮಧುಮೇಹದಿಂದ ದೇಹದ ಹಲವು ಭಾಗಗಳಿಗೆ ಹಾನಿಯಾಗುವ ಸಾಧ್ಯತೆಯಿದ್ದು, ಇದನ್ನು ತಡೆಗಟ್ಟುವ ಉದ್ದೇಶದಿಂದ , ಮಧುಮೇಹ ರೋಗ ಬಾರದಂತೆ ಕ್ರಮ ವಹಿಸುವ ಹಾಗೂ ರೋಗವನ್ನು ನಿಯಂತ್ರಿಸುವ ವಿಷಯದಲ್ಲಿ ಮಧುಮೇಹಿಗಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣಾ ಕಾರ್ಯಕ್ರಮ ನಡೆಯಲಿದೆ, ಸೂಕ್ತ ಆಹಾರ ಪದ್ದತಿ ಹಾಗೂ ಜೀವನಶೈಲಿಯಿಂದ ಮಧುಮೇಹ ನಿಯಂತ್ರಣ ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಸರ್ಜನ್ ಡಾ. ಮುಧುಸೂಧನ ನಾಯಕ್, ಆರ್ಯುವೇದ ಫೆಡರೇಷನ್ ಅಧ್ಯಕ್ಷ ಎನ್.ಟಿ.ಅಂಚನ್ ಉಪಸ್ಥಿತರಿದ್ದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಅಲಕಾನಂದ ರಾವ್ ಸ್ವಾಗತಿಸಿ, ವಂದಿಸಿದರು


Spread the love