ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮ ಶತ ಸಂಭ್ರಮ

Spread the love

ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾಗಾಂಧಿ ಜನ್ಮ ಶತ ಸಂಭ್ರಮ

ಉಡುಪಿ: ಮಾಜಿ ಪ್ರಧಾನಿ ದೇಶದ ಪ್ರಥಮ ಮಹಿಳಾ ಪ್ರಧಾನಿ ದಿ. ಇಂದಿರಾಗಾಂಧಿಯವರ ನೂರನೇ ಜನ್ಮದಿನದ ಅಂಗವಾಗಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಇಂದಿರಾ ಗಾಂಧಿ ಶತ ಸಂಭ್ರಮ ಶಿರ್ಷಿಕೆಯಡಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವೆರೋನಿಕಾ ಕರ್ನೆಲಿಯೋ ಹೇಳೀದರು.

ಅವರು ಗುರುವಾರ ನಗರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಸಂಭ್ರಮದ ಅಂಗವಾಗಿ ಇಂದಿರಾ ಗಾಂಧಿಯವರ ಪುತ್ಥಳಿ ಅನಾವರಣ, ಸರ್ವತೋಮುಖ ಸಾಧನೆ ತೋರಿದ ಜಿಲ್ಲೆಯ ಒರ್ವ ಮಹಿಳೆಗೆ ಪ್ರಿಯದರ್ಶಿನಿ ಪ್ರಶಸ್ತಿ (ಪ್ರತಿ ವರ್ಷ), ಇಂದಿರಾ ಮನೆ ಯೋಜನೆ (ಸರಕಾರದ ಸೌಲಭ್ಯ ಪಡೆಯಲು ಅಸಾಧ್ಯವಾದ ಮಹಿಳೆಯರಿಗೆ ಮನೆ ನಿರ್ಮಿಸಿಕೊಡುವ ಯೋಜನೆ) ಮೊದಲಾದ ಕಾರ್ಯಕ್ರಮಗಳ ಜೊತೆಗೆ ಅನಾಶ್ರಮ, ವೃದ್ಧಾಶ್ರಮ, ನಿರ್ಗತಿಕರ ಕೇಂದ್ರಗಳಿಗೆ ಮಹಿಳಾ ಕಾಂಗ್ರೆಸ್ ವತಿಯಿಂದ ಭೇಟಿ ನೀಡಿ ಮೂಲ ಸೌಕರ್ಯಗಳು, ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. 10 ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿ ಸೂಚಿಸುವ 10 ಸಾಧಕಿಯರಿಗೆ ಸನ್ಮಾನ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿರುವ ಕಾರ್ಯಕರ್ತುರುಗಳಿಗೆ, ಪಕ್ಷದ ಮಹಿಳಾ ಜನಪ್ರತಿನಿಧಿಗಳೀಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು, ವಿದ್ಯಾರ್ತಿಗಳಿಗೆ ಇಂದಿರಾ ಗಾಂಧಿಯವರ ಕುರಿತಾದ ರಸಪ್ರಶ್ನೆ, ಚಿತ್ರಕಲೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಲು ನಿರ್ಧರಿಸಲಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳು ವರ್ಷಪೂರ್ತಿ ನಡೆಯಲಿದ್ದು, ಜಿಲ್ಲೆಯ 10 ಬ್ಲಾಕ್ ನಲ್ಲಿ 10 ಕಾರ್ಯಕ್ರಮಗಳಂತೆ ಮಹಿಳಾ ಕಾಂಗ್ರೆಸ್ ಸಮಾವೇಶಗಳೂ ಸೇರಿ ಸರಿಸುಮಾರು 100 ಕಾರ್ಯಕ್ರಮಗಳು ಇಂದಿರಾಜಿಯವರ ಹುಟ್ಟುಹಬ್ಬದ 100ನೇ ವರ್ಷಾಚರಣೆಯಲ್ಲಿ ನಡೆಯಲಿರುವುದು.

ಇದರ ಉದ್ಘಾಟನ ಸಮಾರಂಭ ಮಾರ್ಚ್ 11 ರಂದು ಶನಿವಾರ ಬೆಳಿಗ್ಗೆ 11 ಗಂಟೆಗೆ ಉಡುಪಿಯ ಪುರಭವನದಲ್ಲಿ ನಡೆಯಲಿದ್ದು ಸಮಾರೋಪ ಸಮಾರಂಭ ನವೆಂಬರ್ 19 ರಂದು ನಡೆಯಲಿದೆ. ಉದ್ಘಾಟನ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲ ಪೂಜಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಕೆ ಪ್ರತಾಪ್ ಚಂದ್ರ ಶೆಟ್ಟಿ, ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಎಮ್ ಎ ಗಫೂರ್, ಮಾಜಿ ಶಾಸಕರಾದ ಗೋಪಾಲ ಭಂಡಾರಿ, ರಾಜ್ಯ ಮಹಿಳಾ ಕಾಂಗ್ರೆಸಿನ ಪದಾಧಿಕಾರಿಗಳು, ಜಿಲ್ಲೆಯ ಮಹಿಳಾ ನಾಯಕಿಯರು, ಹಾಗೂ ಜಿಲ್ಲೆಯ ಇತರ ಮುಖಂಡರು ಉಪಸ್ಥಿತರಿರುವರು. ಇದೇ ದಿನ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಕೂಡ ಆಚರಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ನಾಯಕಿಯರಾದ ಜಯಶ್ರೀ ಕೃಷ್ಣರಾಜ್, ಚಂದ್ರಿಕಾ ಶೆಟ್ಟಿ, ಡಾ ಸುನಿತಾ ಶೆಟ್ಟಿ, ಗೋಪಿ ಕೆ ನಾಯ್ಕ ಉಪಸ್ಥಿತರಿದ್ದರು.


Spread the love