ಜಿಲ್ಲೆಯಲ್ಲಿ ಭೀಕರ ಮಳೆ – ಹೆಬ್ರಿಯಲ್ಲಿ ಹರಿಯುವ ತೋಡಿಗೆ ಬಿದ್ದು ಬಾಲಕ ಸಾವು

Spread the love

ಜಿಲ್ಲೆಯಲ್ಲಿ ಭೀಕರ ಮಳೆ – ಹೆಬ್ರಿಯಲ್ಲಿ ಹರಿಯುವ ತೋಡಿಗೆ ಬಿದ್ದು ಬಾಲಕ ಸಾವು

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಶುಕ್ರವಾರ ಹೆಬ್ರಿಯ ಕಾನ್ ಬೆಟ್ಟು ಎಂಬಲ್ಲಿ ಬಾಲಕನೋರ್ವ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ವರದಿಯಾಗಿದೆ.

ಮೃತ ಬಾಲಕನನ್ನು ಹೆಬ್ರಿ ಕಾನ್ ಬೆಟ್ಟು ನಿವಾಸಿ ದಯಾನಂದ ಅವರ ಪುತ್ರ ಶ್ರೀಕಾಂತ್ (9) ಎಂದು ಗುರುತಿಸಲಾಗಿದೆ.

ಮೃತ ಬಾಲಕ ಸುರಿಯುತ್ತಿರುವ ಮಳೆಯ ಸಮಯದಲ್ಲಿ ತನ್ನ ಮನೆಯ ಎದುರಿನ ನೀರು ಹರಿಯುವ ತೋಡಿನ ಬಳಿ ಹೋಗಿದ್ದ ವೇಳೆ ಕಾಲು ಜಾರಿ ತೋಡಿಗೆ ಬಿದ್ದು ಸಾವನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಮೃತ ಬಾಲಕ ಹೆಬ್ರಿ ಅಮೃತ ಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.

ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love