ಜು15- ಅ1 ರವರೆಗೆ ಪಲಿಮಾರು, ನಂದಿಕೂರು ವ್ಯಾಪ್ತಿಯಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸ್ವಯಂ ಪ್ರೇರಿತ ಲಾಕ್ ಡೌನ್

Spread the love

ಜು15- ಅ1 ರವರೆಗೆ ಪಲಿಮಾರು, ನಂದಿಕೂರು ವ್ಯಾಪ್ತಿಯಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸ್ವಯಂ ಪ್ರೇರಿತ ಲಾಕ್ ಡೌನ್

ಉಡುಪಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೋರೊನಾ ಸೋಂಕಿನ ಹಿನ್ನಲೆಯಲ್ಲಿ ಪಲಿಮಾರು ಹಾಗೂ ನಂದಿಕೂರು ವ್ಯಾಪ್ತಿಯ ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಿರ್ಧರಿಸಿದ್ದಾರೆ

ಈ ಬಗ್ಗೆ ಪಲಿಮಾರು ಪಂಚಾಯತ್ ಸಭಾಭವನದಲ್ಲಿ ಸಭೆ ನಡೆಸಿದ್ದು ಜುಲೈ 15 ರಿಂದ ಅಗಸ್ಟ್ ಒಂದರ ವರೆಗೆ ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಲಿಮಾರು ಹಾಗೂ ನಂದಿಕೂರಿನ ಎಲ್ಲಾ ಗ್ರಾಮಸ್ಥರು, ವರ್ತಕರು ಹಾಗೂ ರಿಕ್ಷಾ/ಕಾರು ಮಾಲಕ ಚಾಲಕರಿಂದ ಮಧ್ಯಾಹ್ನ 1:00 ಗಂಟೆಯಿಂದ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಲು ನಿರ್ಧರಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love