ಜೂ 8 ರಿಂದ ಚರ್ಚಿನಲ್ಲಿ ಪೂಜೆಗಳು ಆರಂಭವಾಗಲಿದೆ? – ಒಂದು ಅಭಿಪ್ರಾಯ

Spread the love

ಜೂ 8 ರಿಂದ ಚರ್ಚಿನಲ್ಲಿ ಪೂಜೆಗಳು ಆರಂಭವಾಗಲಿದೆ? – ಒಂದು ಅಭಿಪ್ರಾಯ

ಆಗ ದೇವರು ನೋಹನಿಗೆ–ಮನುಷ್ಯರೆಲ್ಲರ ಅಂತ್ಯವು ನನ್ನ ಮುಂದೆ ಬಂತು; ಅವರಿಂದ ಭೂಮಿಯು ಬಲಾತ್ಕಾರದಿಂದ ತುಂಬಿದೆ; ಇಗೋ, ನಾನು ಭೂಮಿಯೊಂದಿಗೆ ಅವರನ್ನು ನಾಶಮಾಡು ವೆನು. (ಆದಿಕಾಂಡ 6:13) ಬಳಿಕ ಆತ 40 ದಿನ 40 ರಾತ್ರಿಗಳ ಮಳೆ ಕಳುಹಿಸಿದರು. ಪ್ರವಾಹ ಕೊನೆಯಾಗುತ್ತಿದ್ದಂತೆ ನೋಹ ಹಡಗಿನ ಬಾಗಿಲನ್ನು ತೆರೆದು ಮೊದಲು ಕಾಗೆಯನ್ನು ಹೊರಗೆ ಕಳುಹಿಸಿದರು. ಬಳಿಕ ಮೂರು ಬಾರಿ ಪಾರಿವಾಳವನ್ನು ಕಳುಹಿಸಿ ಪರಿಸ್ಥಿತಿಯ ಅವಲೋಕನ ಮಾಡಿಕೊಂಡರು.

ಕಳೆದ ಎರಡುವರೆ ತಿಂಗಳಿನಿಂದ ಬೀಗ ಹಾಕಲ್ಪಟ್ಟ ಧಾರ್ಮಿಕ ಸ್ಥಳಗಳು ಜೂನ್ 8 ರಂದು ತೆರೆಯಬಹುದು ಎಂದು ಸರಕಾರ ಮಾಹಿತಿ ನೀಡಿದ್ದು ಆದ್ದರಿಂದ ನಮ್ಮ ವಿಶ್ವಾಸಿ ಭಕ್ತರು ಈ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿಯನ್ನು ಕೇಳುತ್ತಿದ್ದಾರೆ. ಬರುವ ಭಾನುವಾರ ಪೂಜೆ ಆರಂಭಗೊಳ್ಳುತ್ತದೋ ಎಂದು ಕೇಳುತ್ತಿದ್ದಾರೆ. ಆದರೆ ಕಳೆದ ಎರಡುವರೆ ತಿಂಗಳುಗಳಿಂದ ಮನೆಯ ಒಳಗೆ ಕೂತು ಈಗ ಏಕಾಏಕಿ ಹೊರಗಡೆ ಓಡಿ ಬಂದು ನೀರಿನ ಕಟ್ಟು ಬಿಡಿಸಿದಂತೆ ದೇವಸ್ಥಾನ, ಚರ್ಚು, ಮಸೀದಿಗಳಿಗೆ ಜನರು ಹೋಗಲು ತಯಾರಿ ನಡೆಸುತ್ತಿದ್ದಾರೆ.

ಒಂದು ನಿಮಿಷ ನಿಲ್ಲಿ!
ನೆನಪಿರಲಿ ಬಂಧುಗಳೇ, ಕಳೆದ ಎರಡುವರೆ ತಿಂಗಳು ಮನೆಯ ಒಳಗಡೆ ಕೂತು ಇದ್ದ ವೇಳೆ ಊರಿನಲ್ಲಿ ಕಾಯಿಲೆಯ ಪ್ರಮಾಣ ಕಡಿಮೆ ಇತ್ತು ಆದರೆ ಈಗ ದಿನಗಳೆದಂತೆ ಕಾಯಿಲೆಯ ಪ್ರಮಾಣ ಹೆಚ್ಚುತ್ತಿದೆ. ಆದ್ದರಿಂದ ಕಿವಿಗೆ ಗಾಳಿ ಹೊಕ್ಕ ಕರುವಿನಂತೆ ನಾವಾಗುವುದು ಬೇಡ ಮತ್ತು ಕಾಯಿಲೆ ಹೆಚ್ಚುತ್ತಿರುವ ಸಮಯದಲ್ಲಿ ಸಮುದಾಯದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲು, ಶಾಲೆಗಳನ್ನು ಆರಂಭಿಸಲು ಪ್ರಯತ್ನ ಮಾಡುವ ಮೊದಲು ನಾಲ್ಕು ಬಾರಿ ಚಿಂತನೆ ನಡೆಸುವ ಅಗತ್ಯವಿದೆ.

40 ದಿನಗಳ ಬಳಿ ನೋಹ ಕೂಡ ನಾಲ್ಕು ಬಾರಿ ಚಿಂತಿಸಿ ಬಳಿಕ ಭೂಮಿಯ ಮೇಲೆ ಕಾಲಿಟ್ಟರು ಈ ವರೆಗೆ ಶಾಂತ ಚಿತ್ತರಾಗಿ, ಮನೆಯಲ್ಲಿ ಪ್ರಾರ್ಥನೆ ನೆರವೇರಿಸಿ ಸುರಕ್ಷಿತವಾಗಿದ್ದ ನಾವು ಮುಂದಿನ ದಿನಗಳನ್ನು ಆರಂಭಿಸುವಾಗ ಅದೇ ತಾಳ್ಮೆ, ಉಳಿಸಿಕೊಂಡು ನಮ್ಮ ಆರೋಗ್ಯ ರಕ್ಷಿಸಿಕೊಳ್ಳೋಣ

 

 

ಬರಹ: ವಂ|ಜೆ ಬಿ ಕ್ರಾಸ್ತಾ


Spread the love

1 Comment

  1. ಹೀಗಿರಲಿ

    ವಾರದ ಪ್ರತಿ ದಿನ(ಶನಿವಾರ ಮತ್ತು ರವಿವಾರ ಹೊರತುಪಡಿಸಿ) ಚರ್ಚಿನ ಒ೦ದೊ೦ದು ವಾಳೆಗಳಿಗೆ ಪೂಜೆ ನಡೆಸುವುದು. ಶನಿವಾರ ಮತ್ತು ರವಿವಾರ ತಲಾ ಮೂರು ಪೂಜೆ ನಡೆಸಿ ಬಾಕಿ ಉಳಿದ ವಾಳೆಯವರಿಗೆ ಅವಕಾಶ ನೀಡುವುದು. ಸಹಾಯಕ ದರ್ಮಗುರುಗಳಿರುವಲ್ಲಿ ಪೂಜೆಯ ಸ೦ಖ್ಯೆ ಹೆಚ್ಹಿಸುವುದು. ಪ್ರತಿ ವಾರ ದಿನಗಳನ್ನು ಬದಲಿಸುವುದು.
    ಮಕ್ಕಳಿಗೆ ಹಾಗು ಹಿರಿಯ ನಾಗರಿಕರಿಗೆ ಪ್ರತ್ಯೇಕ ಪೂಜೆ ಸಾದ್ಯವಿದ್ದಲ್ಲಿ ನಡೆಸುವುದು. ಸಾನಿಟೈಸರುಗಳನ್ನು ಜನರೆ ಪ್ರಾಯೋಜಿಸುವುದು. ಪ್ರತಿ ಬೆ೦ಚಿಗೆ ಒಬ್ಬರ೦ತೆ ಕುಳಿತುಕೊಳ್ಳುವ೦ತೆ ವ್ಯವಸ್ಥೆ ಮಾಡುವುದು. ಮು೦ದಿನವರು ಎಡದಲ್ಲಿ ಕುಳಿತರೆ ಹಿ೦ದಿನವರು ಬಲದಲ್ಲಿ ಕುಳಿತುಕೊಳ್ಳುವುದು. ಸಾಲಾಗಿ ಬರುವಾಗ ಟೋಕನನ್ನು ನೀಡಿ ನ೦ಬ್ರ ಕೊಡುವುದು. ನಿರ್ಗಮಿಸುವಾಗ ಒ೦ದನೆ ನ೦ಬ್ರ ಮೊದಲಿಗೆ ಅವಕಾಶ ನೀಡುವುದು. ಪರಮ ಪ್ರಸಾದ ನೀಡುವಾಗ ಪಿಪಿಈ ಕಿಟ್ಟನ್ನು ದರಿಸುವುದು. ಸಾಮಾಜಿಕ ಅ೦ತರವನ್ನು ತಿಳಿಸಲು ಸ್ವಯ೦ಸೇವಕರನ್ನು ನೇಮಿಸುವುದು ಅಥವಾ ಪಾಲನಾ ಮ೦ಡಳಿಯ ಸದಸ್ಯರು ಸಹಕರಿಸುವುದು.

    ರಿಚಾರ್ಡ್ ರೊಡ್ರಿಗಸ್ ನಿಡ್ದೋಡಿ

Comments are closed.