ಜೋಡುಪಲ್ಲ ನೆರೆಪೀಡಿತ ಪ್ರದೇಶಕ್ಕೆ ಸಂಸದ ನಳಿನ್, ಡಿವಿಎಸ್ ಭೇಟಿ

Spread the love

ಜೋಡುಪಲ್ಲ ನೆರೆಪೀಡಿತ ಪ್ರದೇಶಕ್ಕೆ ಸಂಸದ ನಳಿನ್, ಡಿವಿಎಸ್ ಭೇಟಿ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಶನಿವಾರ ಸಂಜೆ ನೆರೆಪೀಡಿತ ಜೋಡುಪಲ್ಲ ಪ್ರದೇಶಕ್ಕೆ ಭೇಟಿ ನೀಡಿದರು.

ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದ ಸಂಸದರು ನಿರಾಶ್ರಿತರ ಆರೋಗ್ಯ ವಿಚಾರಿಸಿದರು ಯಾರಿಗೂ ಯಾವುದೇ ರೀತಿಯಲ್ಲಿ ತೊಂದರೆಗಳು ಅಗದಂತೆ ನೋಡಿಕೊಳ್ಳಿ ಎಂದು ಸುಳ್ಯ ತಹಶೀಲ್ದಾರರಿಗೆ ಸೂಚಿಸಿದರು

ಈ ಸಂದರ್ಭದಲ್ಲಿ ಸಂಸದರೊಂದಿಗೆ ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷರಾದ ವೆಂಕಟ್ ವಳಂಬೆ, ಎ. ವಿ . ತೀರ್ಥರಾಮ, ವೆಂಕಟ್ ದಂಬೇಕೋಡಿ, ಸುಬೋದು ಶೆಟ್ಟಿ, ಹರೀಶ್ ಕಂಜಿಪಿಲಿ,ಚಂದ್ರ ಕೋಲ್ಚರ್, ಮೊದಲಾದವರು ಉಪಸ್ಥಿತರಿದ್ದರು.

ಕೇಂದ್ರ ಸಚಿವ ಸದಾನಂದ ಗೌಡ ಭೇಟಿ
ಸುಳ್ಯ ಪ್ರವಾಸಿ ಮಂದಿರದಲ್ಲಿ ನೆರೆ ಪಿಡಿತ ಪ್ರದೇಶದ ಕುರಿತು ಕೇಂದ್ರ ಸರ್ಕಾರದ ಸಚಿವ ಡಿ. ವಿ .ಸದಾನಂದ ಗೌಡರು ವಿವರಿಸಿದರು

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲ್. ಸುಳ್ಯ ಶಾಸಕ ಎಸ್. ಅಂಗಾರ. ಬಿಜೆಪಿ ಮಂಡಲ ಅಧ್ಯಕ್ಷ ರಾದ ವೆಂಕಟ್ ವಳOಬೆ, ಎ. ವಿ. ತೀರ್ಥರಾಮ. ವೆಂಕಟ್ ಡಂಬೇಕೋಡಿ ,ಚಂದ್ರ ಕೋಲ್ಚರ್ ಮೊದಲಾದವರು ಉಪಸ್ಥಿತರಿದ್ದರು


Spread the love