ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಆಸ್ಪತ್ರೆಯಿಂದ ನಿಗೂಢ ನಾಪತ್ತೆ

ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹಿತೆ ಆಸ್ಪತ್ರೆಯಿಂದ ನಿಗೂಢ ನಾಪತ್ತೆ

ಪುತ್ತೂರು: ಜ್ವರಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ನವವಿವಾಹತ ಮಹಿಳೆಯೊಬ್ಬರು ಆಸ್ಪತ್ರೆಯಿಂದ ನಿಗೂಢವಾಗಿ ಕಣ್ಮರೆಯಾದ ಘಟನೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ನಾಪತ್ತೆಯಾದ ಮಹಿಳೆಯನ್ನು  ಶಿನೋಜ್ ಅವರ ಪತ್ನಿ ಪ್ರೇಮ ಎಂದು ಗುರುತಿಸಲಾಗಿದೆ.

ಶಿನೋಜ್ ಅವರ ಪತ್ನಿ ಪ್ರೇಮ ಅವರು ಜ್ವರದಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಬೋಳ್ವಾರಿನ ಪ್ರಗತಿ ಸ್ಪೆಷಾಲಟಿ ಆಸ್ಪತ್ರೆಗೆ ಜುಲೈ 29 ರಂದು ದಾಖಲಾಗಿದ್ದು ಅಲ್ಲಿಂದ ಕಣ್ಮರೆಯಾಗಿದ್ದಾರೆ ಎಂದು ಅವರ ಪತಿ ಶಿನೋಜ್ ಅವರು ಪುತ್ತೂರಿನ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರೇಮ ಅವರು ಮಹಿಳಾ ವಾರ್ಡಿನಲ್ಲಿ ದಾಖಲಾಗಿರುವುದರಿಂದ ಆಕೆಯ ಪತಿ ಶಿನೋಜ್ ಅವರು ಆಸ್ಪತ್ರೆಯ ಹಾಲಿನಲ್ಲಿ ಮಲಗಿದ್ದು ಬೆಳಗ್ಗಿನ ಜಾವ ಪತ್ನಿಯನ್ನು ನೋಡಲೆಂದು ಮಹಿಳಾ ವಾರ್ಡಿಗೆ ತೆರಳಿದ್ದ ವೇಳೆ ಪತ್ನಿ ಪ್ರೇಮ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಕೇರಳ ಕಣ್ಣೂರು ನಿವಾಇಸ ಕುಂಜ್ಞಿ ನಂಬಿಯಾರ್ ಎಂಬವರ ಪುತ್ರ ಶಿನೋಜ್ ಅವರ ವಿವಾಹವು ಸೋಮವಾರಪೇಟೆ ಕುಶಾಲನಗರ ಮಧುಲಾಪುರ ನಿವಾಸಿ ತಾಯಮ್ಮ ಎಂಬವರ ಪುತ್ರಿ ಪ್ರೇಮ ಎಂಬವರೊಂದಿಗೆ ಜುಲೈ 8 ರಂದು ನಡೆದಿತ್ತು. ಜುಲೈ 29ರಂದು ದಂಪತಿಗಳು ಪುತ್ತೂರಿನ ಹಾರಾಡಿಯಲ್ಲಿರುವ ತನ್ನ ಸಹೋದರಿ ಮನೆಗೆ ಬಂದವೇಳೆ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪುತ್ತೂರು ನಗರ ಮಹಿಳಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.