ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ

Spread the love

ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ

ಉಡುಪಿ: ಕೊಂಕಣಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹುಟ್ಟಿಕೊಂಡ ನಿರಂತರ್ ಉದ್ಯಾವರ ಸಂಘಟನೆಯಿಂದ ಜನವರಿ 18 ರಿಂದ 20 ರ ತನಕ ಮೂರು ದಿನಗಳ ನಿರಂತರ್ ಕೊಂಕಣಿ ನಾಟಕೋತ್ಸವ ಉದ್ಯಾವರ ಚರ್ಚ್ ಮೈದಾನದಲ್ಲಿ ಪ್ರತಿದಿನ ಸಂಜೆ ಸಂಜೆ 6.30 ನಡೆಯಲಿದೆ.

ನಾಟಕೋತ್ಸವಕ್ಕೆ ಜನವರಿ 18 ರಂದು ಶುಕ್ರವಾರ ಸಂಜೆ 6.15 ಕ್ಕೆ ಉಡುಪಿ ಧರ್ಮಪ್ರಾಂತ್ಯದ ಕುಲಪತಿಗಳಾದ ವಂ|ಸ್ಟ್ಯಾನಿ ಬಿ ಲೋಬೊ ಅವರು ಚಾಲನೆ ನೀಡಲಿದ್ದಾರೆ. ಲೇಖಕರಾದ ರೋಶು ಬಜ್ಪೆ, ಕವಿ ಮತ್ತು ಗೀತ ರಚನೆಕಾರ ವಿಲ್ಸನ್ ಕಟೀಲ್, ಉದ್ಯಾವರ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್ ನೊರೊನ್ಹಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಪಿ. ಲಂಕೇಶ್ ರಚಿತ, ರೋಶು ಬಜ್ಪೆ ಅವರಿಂದ ಅನುವಾದಿತ ಕಲಾಕುಲ್ ಇದರ ಕ್ಲ್ಯಾನ್ ವಿನ್ ಇವರಿಂದ ನಿರ್ದೇಶಿಸಲ್ಪಟ್ಟ ಹೋಮ್ ಸ್ವೀಟ್ ಹೋಮ್ ನಾಟಕ ಪ್ರದರ್ಶನಗೊಳ್ಳಲಿದೆ. ದಿ|ವಿಕ್ಟರ್ ಮೆಂಡೊನ್ಸಾ ಸ್ಮರಣಾರ್ಥ ಅವರ ಮಗ ರೋನೆಟ್ ಮೆಂಡೊನ್ಸಾ ಉದ್ಯಾವರ ಅವರು ನಾಟಕವನ್ನು ಪ್ರಾಯೋಜಿಸಿದ್ದಾರೆ.

ಜನವರಿ 19 ರಂದು ಸಂಜೆ 6.15 ಕ್ಕೆ ಎರಡನೇ ದಿನದ ಸಭಾಕಾರ್ಯಕ್ರಮದಲ್ಲಿ ಪಾಂಬೂರು ಚರ್ಚಿನ ಧರ್ಮಗುರು ವಂ ಪಾವ್ಲ್ ರೇಗೊ, ಉಡುಪಿ ಧರ್ಮಪ್ರಾಂತ್ಯದ ಪಾಕ್ಷಿಕ ಪತ್ರಿಕೆ ಉಜ್ವಾಡ್ ಇದರ ಸಂಪಾದಕ ವಂ|ಚೇತನ್ ಲೋಬೊ, ಮೂಡುಬೆಳ್ಳೆ ಚಾರಿಟೇಬಲ್ ಟ್ರಸ್ಟ್ ಮೂಡುಬೆಳ್ಳೆ ಇದರ ಮುಖ್ಯಸ್ಥರಾದ ವಲೇರಿಯನ್ ಎಂ ಆಳ್ವ, ಸಂತ ಫ್ರಾನ್ಸಿಸ್ ಕನ್ನಡ ಮಾಧ್ಯಮ ಹೈಸ್ಕೂಲ್ ಇದರ ಮುಖ್ಯೋಪಾಧ್ಯಾಯಿನಿ ಸಿ ವಿಲ್ಮಾ ಪಿಂಟೊ ಮುಖ್ಯ ಅಭ್ಯಾಗತರಾಗಿ ಸಭಾಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ಅಮರ್ ಛಾಪ್ರಾ ದೆಕೊಸ್ತಾ ರಚಿತ, ಡೆನಿಸ್ ಮೊಂತೆರೊ ನಿರ್ದೇಶನದ “ಅಂಕ್ವಾರ್ ಮೆಸ್ತ್ರಿ” ನಾಟಕ ಪ್ರದರ್ಶನಗೊಳ್ಳಲಿದೆ. ಮೂಡುಬೆಳ್ಳೆ ಚಾರಿಟೇಬಲ್ ಟ್ರಸ್ಟ್ ಮೂಡುಬೆಳ್ಳೆ ಇದರ ಮುಖ್ಯಸ್ಥರಾದ ವಲೇರಿಯನ್ ಎಂ ಆಳ್ವ, ಎರಡನೇ ದಿನದ ನಾಟಕವನ್ನು ಪ್ರಾಯೋಜಸಿದ್ದಾರೆ.

ಜನವರಿ 20 ಮೂರನೇ ದಿನ ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್ ಇದರ ವಂ| ಆಲ್ಬನ್ ಡಿಸೋಜಾ, ಟ್ರಿನಿಟಿ ಐಟಿಐಉದ್ಯಾವರ ಇದರ ಪ್ರಾಂಶುಪಾಲ ಜೋನ್ ಎಂ. ಡಿಸೋಜಾ, ಉದ್ಯಮಿ ಅಮೃತ್ ಶೆಣೈ, ಸೌಹಾರ್ದ ಸಮಿತಿ ಉದ್ಯಾವರ ಇದರ ವಿಲ್ಫ್ರೇಡ್ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರದ ಬಳಿಕ ವಂ ಆಲ್ವಿ್ನ ಸೇರಾವೊ ರಚಿಸಿದ ನಿನಾಸಂನ ಕ್ರಿಸ್ಟೋಫರ್ ನಿರ್ದೇಶಿಸಿದ “ಸಳ್ಗಿ” ನಾಟಕ ಪ್ರದರ್ಶನಗೊಳ್ಳಲಿದೆ. ದಿ|ದಿವಿನಾ ಅಲ್ಮೇಡಾ ಇವರ ಸ್ಮರಣಾರ್ಥ ಅವರ ಮಗ ಹೆನ್ರಿ ಡಿ ಆಲ್ಮೇಡಾ ಮತ್ತು ಕುಟುಂಬ ಉದ್ಯಾವರ ನಾಟಕವನ್ನು ಪ್ರಾಯೋಜಿಸಿದ್ದಾರೆ ಎಂದು ಸಂಘಟನೆಯ ಅಧ್ಯಕ್ಷ ಸ್ಟೀವನ್ ಕುಲಾಸೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love