ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

Spread the love

ಮಂಗಳೂರು: ಜ.24 ರಿಂದ 26 ರವರೆಗೆ ಫಲಪುಷ್ಪ ಪ್ರದರ್ಶನ-2020

ಮಂಗಳೂರು: ತೋಟಗಾರಿಕೆ ಇಲಾಖೆ, ದ.ಕ ಜಿಲ್ಲಾ ಪಂಚಾಯತ್, ದ.ಕ ಜಿಲ್ಲಾಡಳಿತ ಹಾಗೂ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು, ಮತ್ತು ಇತರೆ ಅಭಿವೃದ್ಧಿ ಇಲಾಖೆಗಳ ಸಹಭಾಗಿತ್ವದಲ್ಲಿ ಫಲಪುಷ್ಪ ಪ್ರದರ್ಶನ-2020 ಕಾರ್ಯಕ್ರಮ ಜನವರಿ 24 ರಿಂದ 26 ರವರೆಗೆ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ.

ಫಲಪುಷ್ಪ ಪ್ರದರ್ಶನ-2020 ಕಾರ್ಯಕ್ರಮವನ್ನು ಜನವರಿ 24 ರಂದು ಬೆಳಿಗ್ಗೆ 11 ಗಂಟೆಗೆ ಕದ್ರಿ ಉದ್ಯಾನವನದಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ್ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


Spread the love