ಟೋಲ್ ಸಮಸ್ಯೆ ಕುರಿತು ಕೇಂದ್ರ ಸಚಿವ ಗಡ್ಕರಿ ಬಳಿ ಸದ್ಯವೇ ನಿಯೋಗ – ಡಾ|ಜಯಮಾಲಾ

Spread the love

ಟೋಲ್ ಸಮಸ್ಯೆ ಕುರಿತು ಕೇಂದ್ರ ಸಚಿವ ಗಡ್ಕರಿ ಬಳಿ ಸದ್ಯವೇ ನಿಯೋಗ – ಡಾ|ಜಯಮಾಲಾ

ಉಡುಪಿ: ಉಡುಪಿ ಜಿಲ್ಲೆಯ ಟೋಲ್ ಸಮಸ್ಯೆಗೆ ರಾಜ್ಯಸರಕಾರದಿಂದ ಯಾವುದೇ ನಿರ್ದಾರ ಕೈಗೊಳ್ಳುವುದು ಸಾಧ್ಯವಿಲ್ಲ ಬದಲಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಯಿಂದ ಮಾತ್ರ ಪರಿಹಾರ ಸಾಧ್ಯ ಅದಕ್ಕಾಗಿ ಕೇಂದ್ರಕ್ಕೆ ನಿಯೋಗವನ್ನು ಸದ್ಯದಲ್ಲಿ ಕೊಂಡೊಯ್ಯಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ|ಜಯಮಾಲಾ ಹೇಳಿದರು.

ಈ ಕುರಿತು ಉಡುಪಿಯಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದಸಿದ ಸಚಿವರು ಜಿಲ್ಲೆಯ ಟೋಲ್ ಗೇಟ್ ಸಮಸ್ಯೆಗೆ ರಾಜ್ಯ ಲೋಕೊಪಯೋಗಿ ಸಚಿವರು ಸೇರಿದಂತೆ ನಾವೆಲ್ಲರೂ ದೆಹಲಿಗೆ ನಿಯೋಗ ತೆರಳಿ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಮನವಿ ಮಾಡುವ ಕುರಿತು ನಿರ್ಧರಿಸಲಾಗಿದೆ. ಸರ್ವಿಸ್ ರಸ್ತೆ ಪೂರ್ಣಗೊಳ್ಳುವ ವರೆಗೆ ಸ್ಥಳೀಯ ವಾಹನಗಳಿಗೆ ಟೋಲ್ ನಿಂದ ರಿಯಾಯತಿ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಸಚಿವೆ ಜಯಮಾಲಾ ತಿಳಿಸಿದರು.

ಟೋಲ್ ಗೇಟ್ ಸಂಬಂಧಿಸಿದಂತೆ ಯಾರೂ ಕೂಡ ಮಾತನಾಡಿದರೂ ಅದು ಹಕ್ಕುಚ್ಯುತಿ ಆಗುತ್ತದೆ. ಈ ವಿಚಾರದಲ್ಲಿ ನನಗೂ ಯಾವುದೇ ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲದಕ್ಕೂ ಸೂಕ್ತ ಉತ್ತರವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ನೀಡಬೇಕು. ಅದು ಬಿಟ್ಟು ಬೇರೆ ದಾರಿ ಇಲ್ಲ. ಈ ನಡುವೆ ಮಾರ್ಚ್ ಒಳಗಡೆ ಸರ್ವಿಸ್ ರಸ್ತೆ ಮಾಡುವುದಾಗಿ ನವಯುಗ ಕಂಪೆನಿಯವರು ಭರವಸೆ ನೀಡಿದ್ದಾರೆ ಎಂದು ಸಚಿವೆ ಹೇಳಿದರು.


Spread the love