ಟ್ರೇಡಿಂಗ್ ಗೇಮಿಂಗ್ ಸೋಗಿನಲ್ಲಿ ಯುವಕನಿಗೆ 5.31 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

Spread the love

ಟ್ರೇಡಿಂಗ್ ಗೇಮಿಂಗ್ ಸೋಗಿನಲ್ಲಿ ಯುವಕನಿಗೆ 5.31 ಲಕ್ಷ ರೂ. ವಂಚನೆ; ಪ್ರಕರಣ ದಾಖಲು

ಮಂಗಳೂರು: ಟ್ರೇಡಿಂಗ್ ಗೇಮಿಂಗ್ ಮೂಲಕ ಹಣವನ್ನು ಡಬಲ್ ಮಾಡಿಕೊಡುವುದಾಗಿ ನಂಬಿಸಿ ಯುವಕನೋರ್ವನಿಂದ 5.31 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ವರದಿಯಾಗಿದೆ.

22 ವರ್ಷದ ಯುವಕ ಟೆಲಿಗ್ರಾಂ ಖಾತೆ ವೀಕ್ಷಿಸುತ್ತಿದ್ದ ಸಂದರ್ಭ ಫೇರ್ ಪ್ಲೆ ವೆಬ್ ಸೈಟ್‌ಗೆ ಸೇರ್ಪಡೆಗೊಂಡು ಟ್ರೇಡಿಂಗ್ ಮತ್ತು ಗೇಮಿಂಗ್ ಮೂಲಕ ಹಣ ದ್ವಿಗುಣಗೊಳಿಸಬಹುದು ಎಂಬ ಮೆಸೇಜ್‌ನ್ನು ವಂಚಕರು ಕಳುಹಿಸಿದ್ದರು. ಅನಂತರ ಯುವಕನನ್ನು ನಂಬಿಸಿ ಜ.29ರಿಂದ ಜೂ.1ರವರೆಗೆ ಹಂತಹಂತವಾಗಿ ಗೂಗಲ್, ಪೇಟಿಯಂ ಮೂಲಕ 5.31 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ಆರೋಪಿಸಿ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಸಂಬಂಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Subscribe
Notify of

0 Comments