ಡಿಸೆಂಬರ್ 10 ರಂದು ಪಟ್ಲ ಯಕ್ಷಾಶ್ರಯದ 3 ನೇ ಮನೆಯ ಗೃಹಪ್ರವೇಶ

Spread the love

ಡಿಸೆಂಬರ್ 10 ರಂದು ಪಟ್ಲ ಯಕ್ಷಾಶ್ರಯದ 3 ನೇ ಮನೆಯ ಗೃಹಪ್ರವೇಶ

ಮಂಗಳೂರು: ಕುಂಜತ್ತಬೈಲ್ ಎಂಬಲ್ಲಿ ಯಕ್ಷಗಾನ ಕಲಾವಿದರಾದ ಪುರಂದರ ಇವರಿಗೆ ಪಟ್ಲ ಯಕ್ಷಾಶ್ರಯ ಯೋಜನೆಯಡಿ ಮನೆಯನ್ನು ನಿರ್ಮಿಸಿಕೊಡಲಾಗುತ್ತಿದ್ದು, ಗೃಹಪ್ರವೇಶದ ಬಗ್ಗೆ ಕುಂಜತ್ತಬೈಲ್ ಅಯ್ಯಪ್ಪ ಮಂದಿರದ ಆವರಣದಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಸಭೆ ಸೇರಿ ಸಿದ್ಧತೆಗಳ ಬಗ್ಗೆ ನಿರ್ಧರಿಸಲಾಯಿತು.

ಡಿಸೆಂಬರ್ 10ರಂದು ಸೋಮವಾರ ಬೆಳಿಗ್ಗೆ ಶ್ರೀ ದೇವಿ ನಿಲಯ, ಪಟ್ಲ ಯಕ್ಷಾಶ್ರಯ – 3 ಇದರ ಗೃಹಪ್ರವೇಶ ನೆರವೇರಲಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‍ನ ಪ್ರಕಟನೆ ತಿಳಿಸಿದೆ. ಇದು ಯಕ್ಷಧ್ರುವ ಪಟ್ಲ ಫೌಂಡೇಶನ್‍ನಿಂದ ನಿರ್ಮಿಸಿಕೊಡುತ್ತಿರುವ ಮೂರನೇ ಮನೆಯಾಗಿದೆ. ಸಮಾರಂಭದಲ್ಲಿ ಪಟ್ಲ ಫೌಂಡೇಶನ್ ಘಟಕದ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಹಿತ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.


Spread the love