ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

Spread the love

ಡಿ. 22-31 ರ ವರೆಗೆ ಕರಾವಳಿ ಉತ್ಸವ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ದಿನಾಂಕ 22.12.2017 ರಿಂದ 31.12.2017ರ ವರೆಗೆ ಒಟ್ಟು 10 ದಿನಗಳ ಪರ್ಯಂತ ಮಂಗಳೂರು ನಗರದ ವಸ್ತು ಪ್ರದರ್ಶನ ವೇದಿಕೆ ಹಾಗೂ ಕದ್ರಿ ಉದ್ಯಾನವನದ ವೇದಿಕೆಗಳಲ್ಲಿ ಪ್ರತಿದಿನ ಸಂಜೆ 6 ರಿಂದ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

 ಕರ್ನಾಟಕೀ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಭರತನಾಟ್ಯ, ನೃತ್ಯ ರೂಪಕ, ಜಾದೂ ಪ್ರದರ್ಶನ, ಯಕ್ಷಗಾನ, ತಾಳಮದ್ದಳೆ, ತುಳು ನಾಟಕ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಉದಯೋನ್ಮುಖ ಕಲಾವಿದರು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ಕಲಾವಿದರು ಭಾಗವಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲಿದ್ದಾರೆ.

ಪ್ರಮುಖವಾಗಿ ಕದ್ರಿ ಉದ್ಯಾನವನದ ವೇದಿಕೆಯಲ್ಲಿ 22.12.2017 ರ ಶುಕ್ರವಾರ ಸಂಜೆ 6 ರಿಂದ 7.15ರ ವರೆಗೆ ವಿದುಷಿ ಶಂಕರಿ ಮೂರ್ತಿ ಬಾಳಿಲ ಹಾಗೂ ತಂಡ ಪುತ್ತೂರು ಇವರಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ, 7.15 ರಿಂದ 9ರ ವರೆಗೆ  ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಮತ್ತು ತಂಡ, ಮಂಗಳೂರು ಇವರಿಂದ ವಿಸ್ಮಯ ಜಾದೂ, 23.12.2017ರ ಶನಿವಾರ ಸಂಜೆ 6 ರಿಂದ 7.45ರ ವರೆಗೆ ವೈಭವ್ ಅರೇಕರ್ ಮತ್ತು ತಂಡ, ಮುಂಬಯಿ ಇವರಿಂದ “ಶಿವಂ” ನೃತ್ಯ ವೈಭವ, 7.45 ರಿಂದ 9.30ರ ವರೆಗೆ ಪದ್ಮಶ್ರೀ ಪುರಸ್ಕೃತ ಉಸ್ತಾದ್ ಶಾಹೀದ್ ಪರ್ವೇಜ್, ಪುಣೆ ಇವರಿಂದ ಸಿತಾರ್ ವಾದನ. 24.12.2017ರ ಆದಿತ್ಯವಾರ ಬೆಳಿಗ್ಗೆ 6 ರಿಂದ7.30 ರ ವರೆಗೆ ಕುಮಾರಿ ಯಶಸ್ವಿನಿ ಮತ್ತು ತಂಡ, ಮೂಡಬಿದ್ರೆ ಇವರಿಂದ ಉದಯರಾಗ- ದಾಸ ಕೀರ್ತನೆಗಳು, ಬೆಳಿಗ್ಗೆ 7.30 ರಿಂದ 8.30 ರ ವರೆಗೆ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಮತ್ತು ತಂಡ, ಮಂಗಳೂರು ಇವರಿಂದ ಯೋಗ ಮತ್ತು ಧ್ಯಾನ ಪ್ರದರ್ಶನ, ಸಂಜೆ 6 ರಿಂದ 7.15 ರವರೆಗೆ ಶ್ರೀ ತೇಜಸ್ ಮಂಜುನಾಥ್ ಮತ್ತು ಶ್ರೀ ಪ್ರಣವ್ ಮಂಜುನಾಥ್, ಬೆಂಗಳೂರು ಇವರಿಂದ ವಾಯಲಿನ್ ಜುಗಲ್‍ಬಂಧಿ, 7.15ರಿಂದ 9.15 ರವರೆಗೆ ಶ್ರೀಮತಿ ಕೀರ್ತನಾರಾವ್ ಮತ್ತು ತಂಡ, ಮಂಗಳೂರು ಇವರಿಂದ “ರಾಗ ಒಂದು ಭಾವ ಹಲವು” ಕಾರ್ಯಕ್ರಮ, 25.12.2017 ರ ಸೋಮವಾರ ಸಂಜೆ 6 ರಿಂದ 7.45 ರವರೆಗೆ ಡಾI ವಿದ್ಯಾಭೂಷಣ ಮತ್ತು ತಂಡ, ಬೆಂಗಳೂರು ಇವರಿಂದ ಭಕ್ತಿ ಗೀತೆಗಳು, 7.45 ರಿಂದ 9.30 ರ ರವರೆಗೆ ನಾಟ್ಯಾಲಯ ಉರ್ವ (ರಿ), ಮಂಗಳೂರು ಇವರಿಂದ ನೃತ್ಯ ರೂಪಕ, 26.12.2017 ರ ಮಂಗಳವಾರ ಸಂಜೆ 6 ರಿಂದ 7.15 ರವರೆಗೆ ಶ್ರೀ ಧನಂಜಯ್ ಹೆಗ್ಡೆ ಮತ್ತು ತಂಡ, ಮುಂಬಯಿ ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ ಹಾಗೂ ದಾಸವಾಣಿ, 7.15 ರಿಂದ 9 ರವರೆಗೆ ವಿದುಷಿ ಸಂಗೀತ ಕಟ್ಟಿ ಮತ್ತು ತಂಡ, ಬೆಂಗಳೂರು ಇವರಿಂದ ಹಿಂದೂಸ್ತಾನೀ ಶಾಸ್ತ್ರೀಯ ಗಾಯನ, ದಾಸವಾಣಿ ಹಾಗೂ ವಚನಗಳು, 27.12.2017 ರ ಬುಧವಾರ ಸಂಜೆ 6 ರಿಂದ 7.30 ರ ವರೆಗೆ ಪ್ರಪಂಚಮ್ ಎಸ್.ಬಾಲಚಂದ್ರನ್ ಮತ್ತು ತಂಡ, ಚೆನ್ನೈ ಇವರಿಂದ ಕರ್ನಾಟಕೀ ಕೊಳಲು ವಾದನ, 7.30 ರಿಂದ 9 ರವರೆಗೆ ನೈವೇಲಿ ಸಂತಾನ ಗೋಪಾಲನ್ ಮತ್ತು ತಂಡ, ಚೆನ್ನೈ ಇವರಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ, 28.12.2017 ರ ಗುರುವಾರ ಸಂಜೆ 5 ರಿಂದ 9 ರವರೆಗೆ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಯುವ ಉತ್ಸವ’, 29.12.2017 ಶುಕ್ರವಾರ ಸಂಜೆ 5 ರಿಂದ 9 ರವರೆಗೆ ಜಿಲ್ಲೆಯ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ‘ಯುವ ಉತ್ಸವ’, 30.12.2017ರ ಶನಿವಾರ ಸಂಜೆ 6 ರಿಂದ 7 ರವರೆಗೆ ಶ್ರೀ ಉತ್ತಮ್ ಕುಮಾರ್ ಮತ್ತು ತಂಡ, ಮಂಗಳೂರು ಇವರಿಂದ ದಾಸವಾಣಿ, 7 ರಿಂದ 9 ರ ವರೆಗೆ ವಾಯ್ಸ್ ಆಫ್ ಮ್ಯೂಸಿಕ್, ಮಂಗಳೂರು ಇವರಿಂದ ಸಂಗೀತ ರಸ ಮಂಜರಿ, ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಕರಾವಳಿ ಕಾರ್ಟೂನ್ ಹಬ್ಬ, 31.12.2017 ರ ಆದಿತ್ಯವಾರ ಬೆಳಿಗ್ಗೆ 6 ರಿಂದ 8 ರವರೆಗೆ ಪಂII ಬಾಲಚಂದ್ರ ನಾಕೋಡ್ ಮತ್ತು ತಂಡ, ಹುಬ್ಬಳ್ಳಿ ಇವರಿಂದ ಉದಯರಾಗ-ಹಿಂದೂಸ್ಥಾನೀ ಶಾಸ್ತ್ರೀಯ ಗಾಯನ ಹಾಗೂ ಶಾಸ್ತ್ರೀಯ ಗಾಯನ ಹಾಗೂ ವಚನಗಳು, ಸಂಜೆ 6 ರಿಂದ 8ರ ವರೆಗೆ ಪದ್ಮಶ್ರೀ ಪುರಸ್ಕೃತ ಪಂII ಭಜನ್ ಸಫೆÇೀರಿ, ಅಭಯ ರುಸ್ತುಂ ಸಫೆÇೀರಿ ಮತ್ತು ತಂಡ, ನವ ದೆಹಲಿ ಇವರಿಂದ ಸಂತೂರ್ ಜುಗಲ್ ಬಂಧಿ, 8 ರಿಂದ 9.15ರ ವರೆಗೆ ಅಭಿನ್ನ ಸುಂದರ್ ಗೋಟಿಪುವಾ ನೃತ್ಯ ಪರಿಷತ್, ಪುರಿ, ಒರಿಸ್ಸಾ ಇವರಿಂದ ಗೋಟಿಪುವಾ ನೃತ್ಯ ವೈಭವ, ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಕರಾವಳಿ ಕಾರ್ಟೂನ್ ಹಬ್ಬಕಾರ್ಯಕ್ರಮ ನಡೆಯಲಿದೆ.

ನಗರದ ವಸ್ತು ಪ್ರದರ್ಶನ ವೇದಿಕೆಯಲ್ಲಿ(ಕರಾವಳಿ ಉತ್ಸವ ಮೈದಾನ) ನಡೆಯುವ ಪ್ರಮುಖ ಕಾರ್ಯಕ್ರಮಗಳು 22.12.2017ರ ಶುಕ್ರವಾರ ಸಂಜೆ 6 ರಿಂದ ಕರಾವಳಿ ಉತ್ಸವ ಉದ್ಘಾಟನಾ ಸಮಾರಂಭ, 23.12.2017 ರ ಶನಿವಾರ ಸಂಜೆ 6 ರಿಂದ 7 ರ ವರೆಗೆ ಡಾ.ಮಚ್ಚೇಂದ್ರನಾಥ್ ಮತ್ತು ತಂಡ, ಮಂಗಳೂರು ಇವರಿಂದ ಸ್ಯಾಕ್ಸೋಫೆÇೀನ್ ವಾದನ, 7 ರಿಂದ 9.30 ರವರೆಗೆ ಸಾತ್ವಿಕ ತೇಜ ಕಲಾಕೇಂದ್ರ (ರಿ), ಒಡಿಯೂರು ಇವರಿಂದ ಮಹಿಳಾ ಯಕ್ಷಗಾನ – ಶಾಂಭವಿ ವಿಲಾಸ, 24.12.2017 ರ ಭಾನುವಾರ ಸಂಜೆ 6 ರಿಂದ 7.30 ರವರೆಗೆ ಸ್ವರಶ್ರೀ ಸಂಗೀತ ವಿದ್ಯಾಲಯ, ಮಂಗಳೂರು ಇವರಿಂದ ಭಾವಗೀತೆ ಮತ್ತು ಜಾನಪದ ಗೀತೆಗಳು, 7.30 ರಿಂದ 9 ರವರೆಗೆ ಸೌರಭ ಸಂಗೀತ ಕಲಾ ಪರಿಷತ್ (ರಿ), ಯೆಯ್ಯಾಡಿ, ಮಂಗಳೂರು ಇವರಿಂದ ಭರತನಾಟ್ಯ ವೈಭವ, 25.12.2017ರ ಸೋಮವಾರ ಸಂಜೆ 6 ರಿಂದ 7.30 ರವರೆಗೆ ಶ್ರೀ ಚಂದ್ರಶೇಖರ ಹೆಗ್ಡೆ ಮತ್ತು ತಂಡ, ಪುತ್ತೂರು ಇವರಿಂದ ಸುಗಮ ಸಂಗೀತ, 7.30 ರಿಂದ 9.30ರವರೆಗೆ ಶ್ರೀ ವಿನಾಯಕ ಯಕ್ಷಗಾನ ಮಂಡಳಿ, ಸುರತ್ಕಲ್ ಇವರಿಂದ ಯಕ್ಷಗಾನ ಬಯಲಾಟ, 26.12.2017ರ ಮಂಗಳವಾರ ಸಂಜೆ 6 ರಿಂದ 8ರವರೆಗೆ ಶ್ರೀ ಜಬ್ಬರ್ ಸಮೋ ಹಾಗೂ ಸಹ ಕಲಾವಿದರಿಂದ ತಾಳಮದ್ದಳೆ, 8 ರಿಂದ 9 ರವರೆಗೆ ಮಾಧ್ಯಮ ಮಿತ್ರರು, ಮಂಗಳೂರು ಇವರಿಂದ ಕರಾವಳಿ ಸಾಂಸ್ಕೃತಿಕ ವೈಭವ,  27.12.2017ರ ಬುಧವಾರ ಸಂಜೆ 6 ರಿಂದ 7 ಕನ್ನಡ ಬಳಗ, ಮಂಗಳೂರು ಇವರಿಂದ ಬಹುಭಾಷಾ ಕವಿಗೋಷ್ಠಿ, 7ರಿಂದ 9.30ರ ವರೆಗೆ ಶ್ರೀ ದೇವದಾಸ್ ಕಾಪಿಕಾಡ್, ಬಲೇ ಚಾ ಪರ್ಕ ಕಲಾವಿದರು ಇವರಿಂದ ತುಳು ಹಾಸ್ಯ ನಾಟಕ- ‘ಕೊಡೆ ಬುಡ್ಪಾಲೆ’, 28.12.2017ರ ಗುರುವಾರ ಸಂಜೆ 6 ರಿಂದ 7.30ರ ವರೆಗೆ ನಾದ ನೃತ್ಯ ಸಂಸ್ಥೆ, ಮಂಗಳೂರು ಇವರಿಂದ ನೃತ್ಯ ರೂಪಕ-‘ನೆನಪಾದಳು ಶಕುಂತಳೆ’, 7.30 ರಿಂದ 9.30 ರವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇವರಿಂದ ದಕ್ಷಿಣ ಕನ್ನಡ ಬ್ಯಾರಿ ಸಾಂಸ್ಕೃತಿಕ ವೈವಿಧ್ಯ, 29.12.2017 ರ ಶುಕ್ರವಾರ ಸಂಜೆ 6 ರಿಂದ 7ರ ವರೆಗೆ ಅಂಖಆಖಿS ಸಂವೇದನ ಮನೆ ಮಕ್ಕಳು, ಮಂಗಳೂರು ಇವರಿಂದ ಸಾಂಸ್ಕೃತಿಕ ವೈವಿಧ್ಯ, 7 ರಿಂದ 9 ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇವರಿಂದ ದಕ್ಷಿಣ ಕನ್ನಡ ಕೊಂಕಣಿ ಸಾಂಸ್ಕೃತಿಕ ವೈವಿಧ್ಯ, 30.12.2017 ಶುಕ್ರವಾರ ಸಂಜೆ 6 ರಿಂದ 7ರ ವರೆಗೆ ವಿದುಷಿ ಕುಮಾರಿ ಅನ್ನಪೂರ್ಣ ಶೆಟ್ಟಿ ಮತ್ತು ತಂಡ, ಕಿನ್ನಿಗೋಳಿ ಇವರಿಂದ ಭರತನಾಟ್ಯ ಸಂಭ್ರಮ, 7 ರಿಂದ 9 ರವರೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇವರಿಂದ ದಕ್ಷಿಣ ಕನ್ನಡ ತುಳು ಸಾಂಸ್ಕೃತಿಕ ವೈವಿಧ್ಯ, 31.12.2017ರ ಭಾನುವಾರ ಸಂಜೆ 6 ರಿಂದ 7 ರ ವರೆಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಧ ಕಲಾವಿದೆ ಕುಮಾರಿ ಕಸ್ತೂರಿ ಮತ್ತು ತಂಡ ಇವರಿಂದ ಸಂಗೀತ ಸೌರಭ, 7 ರಿಂದ 9 ರವರೆಗೆ ಶ್ರೀ ಗುರುರಾಜ್ ಮಾರ್ಪಳ್ಳಿ ಮತ್ತು ತಂಡ, ಉಡುಪಿ ಇವರಿಂದ ಕನ್ನಡ ನಾಟಕ-‘ರುದ್ರ ಭೀಮ’ ಕಾರ್ಯಕ್ರಮಗಳು ಜರುಗಲಿದೆ.

ಈ ಎಲ್ಲಾ ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು ಕಲಾಸಕ್ತರು ತಮ್ಮ ಸ್ನೇಹಿತ ವರ್ಗ, ಕುಟುಂಬ ಸದಸ್ಯರ ಸಮೇತ ಬಂದು ಕಲಾ ಪ್ರದರ್ಶನದ ವೈಭವವನ್ನು ಸವಿಯಬೇಕಾಗಿ ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವದ ಸಾಂಸ್ಕೃತಿಕ ಸಮಿತಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


Spread the love