29 C
Mangalore
Thursday, February 21, 2019
Home Mangalorean News Kannada News ಡಿ.9: ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ-2018

ಡಿ.9: ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ-2018

Spread the love

ಡಿ.9: ರಾಜಾಂಗಣದಲ್ಲಿ ಸಂಗೀತ ನೃತ್ಯೋತ್ಸವ-2018

ಉಡುಪಿ:ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ವತಿಯಿಂದ ‘ಸಂಗೀತ ನೃತ್ಯೋತ್ಸವ-2018’ ಆಯೋಜಿಸಲಾಗಿದೆ. ಡಿ.9, ಭಾನುವಾರದಂದು ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲಿ ಈ ಕಲಾ ಉತ್ಸವ ನಡೆಯಲಿದೆ. ಪರ್ಯಾಯ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥರು ಮಾಗೂ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಸಾನಿಧ್ಯವಹಿಸಲಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಅಕಾಡಮಿಯ ಅಧ್ಯಕ್ಷ ಉಸ್ತಾದ್ ಫಯಾಜ್ ಖಾನ್, ಉಳ್ಳಾಲ ಮೋಹನ್ ಕುಮಾರ್, ಟಿ.ರಂಗ ಪೈ, ನಾಗೇಶ್ ಬಪ್ಪನಾಡು, ಎ ಈಶ್ವರಯ್ಯ ಭಾಗವಹಿಸಲಿದ್ದಾರೆ.

ನಾಗೇಶ್ ಬಪ್ಪನಾಡು ಅವರ ನಾಗಸ್ವರ ವಾದನ, ಚಂದ್ರಶೇಖರ ಕೆದ್ಲಾಯರಿಂದ ಗಮಕ ವಾಚನ, ಕಾಂಚನ ಸಹೋದರಿಯರಿಂದ ಹಾಡುಗಾರಿಕೆ, ಜಯಚಂದ್ರ ರಾವ್, ಸುನಾದ ಕೃಷ್ಣ, ರಾಜೇಶ್ ಭಾಗವತ್, ಡಿ.ಕೆ.ಸುರೇಶ್ ತಂಡದಿಂದ ‘ಲಯತರಂಗ’ ನಡೆಯಲಿದೆ. ‘ಭಾವ ಲಹರಿ’ ಕಾರ್ಯಕ್ರಮದಲ್ಲಿ ಕೆ.ಆರ್.ರಾಘವೇಂದ್ರ ಆಚಾರ್ಯ, ಸಂಗೀತಾ ಬಾಲಚಂದ್ರ, ಕಲಾವತಿ ಪುತ್ರನ್ ಭಾಗವಹಿಸಲಿದ್ದಾರೆ. ರವಿಕಿರಣ ಮಣಿಪಾಲ ಅವರ ಹಿಂದೂಸ್ತಾನಿ ಸಂಗೀತ, ‘ಭಕ್ತಿ ಗಾನ ಸುಧಾ’ ಕಾರ್ಯಕ್ರಮದಲ್ಲಿ ದಿವ್ಯಶ್ರೀ, ಶ್ರಾವ್ಯ ಬಾಸ್ರಿ, ವಿನುಷ್ ಭಾರದ್ವಾಜ್ ಹಾಡಲಿದ್ದಾರೆ.

ಪೊಳಲಿ ಜಗದೀಶ ದಾಸಜೀ ಅವರಿಂದ ಹರಿಕಥೆ, ಬೀದರ್ ನ ರಾಜೇಂದ್ರ ಸಿಂಗ್ ಪವಾರ್ ಅವರಿಂದ ಸೋಲೋ ಹಾರ್ಮೋನಿಯಂ, ಜಮಖಂಡಿಯ ಮಾರುತಿ ಭಜಂತ್ರಿ ಅವರಿಂದ ಶೆಹನಾಯ್ ವಾದನ, ಕೊಲ್ಕೊತ್ತದ ಹಿಂದೋಲ್ ಮಜುಂದಾರ್ ಅವರಿಂದ ತಬಲ ಸೋಲೋ ನಡೆಯಲಿದೆ ಕಾರ್ಯಕ್ರಮದ ಕೊನೆಯಲ್ಲಿ ಸುಧೀರ್ ರಾವ್ ಕೊಡವೂರು, ಮೂಡುಬಿದ್ರಿಯ ಮೋನಿಕಾ ಮತ್ತು ಆಯನ ತಂಡ, ಕುಂದಾಪುರದ ಪವಿತ್ರಾ ಅಶೋಕ್, ಮಂಗಳೂರಿನ ವಿದ್ಯಾಶ್ರೀ ರಾಧಾಕೃಷ್ಣ ‘ನೃತ್ಯಲಾಸ್ಯ’ ನಡೆಯಲಿದೆ ಎಂದು ಅಕಾಡಮಿಯ ಸದಸ್ಯ ಸಂಚಾಲಕ ಅರವಿಂದ ಹೆಬ್ಬಾರ್, ಅಕಾಡಮಿಯ ರಿಜಿಸ್ಟ್ರಾರ್ ಅಶೋಕ್ ಎನ್ ಚಲವಾದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Members Login

Obituary

Congratulations