ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ

Spread the love

ಡೆಂಗ್ಯೂ ಜ್ವರಕ್ಕೆ ಖಾಸಗಿ ವಾಹಿನಿಯ ಪತ್ರಕರ್ತ ನಾಗೇಶ್ ಬಲಿ

ಮಂಗಳೂರು: ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಭಾನುವಾರ ರಾತ್ರಿ ಇದೇ ಜ್ವರಕ್ಕೆ ಖಾಸಗಿ ವಾಹಿನಿಯೊಂದರ ಪತ್ರಕರ್ತರೊಬ್ಬರು ಬಲಿಯಾಗಿದ್ದಾರೆ.

ಮೃತರನ್ನು ನಗರದ ನೀರುಮಾರ್ಗ ಸಮೀಪದ ಪಡು ನಿವಾಸಿ ನಾಗೇಶ್ ಎಂದು ಗುರುತಿಸಲಾಗಿದೆ. ನಾಗೇಶ್ ರಾಜ್ಯ ಮಟ್ಟದ ಟಿವಿ ವಾಹಿನಿ ಬಿ ಟಿವಿಯಲ್ಲಿ ವಿಡಿಯೋ ಜರ್ನಲಿಸ್ಟ್ ಸೇವೆ ಸಲ್ಲಿಸುತ್ತಿದ್ದರು.

ಕಳೆದ ಹಲವಾರು ದಿನಗಳಿಂದ ಶಂಕಿತ ಡೆಂಗ್ಯೂವಿನಿಂದ ಬಳಲುತ್ತಿದ್ದ ಅವರು ಜ್ವರ ಉಲ್ಬಣಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಾಗೇಶ್ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.


Spread the love