ತಂಗಿ ಮತ್ತು ಭಾವನ ಮೇಲೆ ಹಲ್ಲೆ ನಡೆಸಿದ ಅಣ್ಣ

Spread the love

ತಂಗಿ ಮತ್ತು ಭಾವನ ಮೇಲೆ ಹಲ್ಲೆ ನಡೆಸಿದ ಅಣ್ಣ

ಮಂಗಳೂರು: ತಂಗಿ ಮತ್ತು ಭಾವನ ಮೇಲೆ ಅಣ್ಣನೋರ್ವ ಹಲ್ಲೆ ನಡೆಸಿದ ಘಟನೆ ಬಿಜೆಯ್ ಕಾಪಿಕಾಡ್ ಬಳಿ ಭಾನುವಾರ ನಡೆದಿದೆ.

ಪೋಲಿಸ್ ಮೂಲಗಳ ಪ್ರಕಾರ ಡೆನಿಸ್ ತನ್ನ ತಂಗಿ ಜಾನೆಟ್ ಮತ್ತು ಆಕೆಯ ಗಂಡ ಜೋಸೇಫ್ ಎಂಬವರ ಮೇಲೆ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದು, ಈ ಬಗ್ಗೆ ಡೆನಿಸ್ ವಿರುದ್ದ ತಂಗಿ ಮತ್ತು ಭಾವ ಉಳ್ಳಾಲ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಗಾಯಗೊಂಡ ದಂಪತಿಯನ್ನು ಪೋಲಿಸರು ಆಸ್ಪತ್ರೆಗೆ ದಾಖಲಿಸಿದ್ದಾರೆ
ಉಳ್ಳಾಲ ಪೋಲಿಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ
ಸ್ಥಳಕ್ಕೆ ಪೋಲಿಸ್ ಆಯುಕ್ತ ಟಿ ಆರ್ ಸುರೇಶ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.


Spread the love