ತಲೆ ಮರೆಸಿಕೊಂಡಿದ್ದ ಕುಖ್ಯಾತ ದನ ಕಳ್ಳನ ಬಂಧನ

Spread the love

ತಲೆ ಮರೆಸಿಕೊಂಡಿದ್ದ ಕುಖ್ಯಾತ ದನ ಕಳ್ಳನ ಬಂಧನ

ಮಂಗಳೂರು: ದನಗಳನ್ನು ಕಳ್ಳತನ ಮಾಡಿ ಪೋಲಿಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ರೌಡಿ ನಿಗ್ರಹದಳದ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮಂಗಳೂರು ಮಲ್ಲೂರು ನಿವಿಆಸಿ ಮುಸ್ತಾಪ @ಮುಸ್ತ(20) ಎಂದು ಗುರುತಿಸಲಾಗಿದೆ.

ಘಟನೆಯ ವಿವರ : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ 2017 ನವೆಂಬರ್ 18 ರಂದು ಬೆಳಗ್ಗಿನ ಜಾವ 04-00 ಮಂಗಳೂರು ತಾಲೂಕು ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಮಸೀದಿಯ ಬಳಿ ಹಿಂಸಾತ್ಮಕ ರೀತಿಯಲ್ಲಿ ದನಕರುಗಳ ಕೈಕಾಲುಗಳನ್ನು ಕಟ್ಟಿಹಾಕಿಕೊಂಡು ಮಾರುತಿ ಓಮ್ನಿ ಕಾರಿನಲ್ಲಿ ಅಮ್ಮೆಮಾರ್ ಇಮ್ರಾನ್, ಮಲ್ಲೂರು ಉದ್ದಬೆಟ್ಟು ನಿವಾಸಿಗಳಾದ ನಿಜಾಮುದ್ದೀನ್ ಹಾಗೂ ಮುಸ್ತಾಪ ಹಾಗೂ ಮಲ್ಲೂರಿನ ಫೌಝಾನ ಎಂಬವರುಗಳು ಎಲ್ಲಿಂದಲೋ ಜಾನುವಾರುಗಳನ್ನು ಕಳವು ಮಾಡಿಕೊಂಡು ಬಂದು ಗದ್ದೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ, ಠಾಣೆಗೆ ಬಂದು ಸಿಬ್ಬಂದಿಗಳೊಂದಿಗೆ ಇಲಾಖಾ ವಾಹನದಲ್ಲಿ ಮಲ್ಲೂರು ಗ್ರಾಮದ ಪಲ್ಲಿಬೆಟ್ಟು ಎಂಬಲ್ಲಿಗೆ 05-00 ಗಂಟೆಗೆ ತಲುಪಿದಾಗ ದೂರದಿಂದಲೇ ಕಂಡ ಆರೋಪಿಗಳು ಮಾರುತಿ ಓಮ್ನಿ ಕಾರೊಂದರಲ್ಲಿ ಹತ್ತಿರ ಸ್ಥಳದಿಂದ ಪರಾರಿಯಾಗಿರುತ್ತಾರೆ. ಸದ್ರಿ ಆರೋಪಿಗಳಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪೈಕಿ ಮಹಮ್ಮದ್ ಮುಸ್ತಾಪ@ ಮುಸ್ತ ಎಂಬಾತನನ್ನು ಮಲ್ಲೂರು ಬಸ್ ಸ್ಟಾಂಡ್ ಬಳಿ ದಸ್ತಗಿರಿ ಮಾಡುವಲ್ಲಿ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ. ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ 2 ಜಾನುವಾರು ಕಳವು ಪ್ರಕರಣಗಳ ದಾಖಲಾಗಿರುತ್ತದೆ.

ಪೊಲೀಸ್ ಕಮೀಷನರ್ ಶ್ರೀ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಎಸಿಪಿ ದಕ್ಷಿಣ ಉಪವಿಭಾಗ ಇವರ ನೇತ್ರತ್ವದಲ್ಲಿ ಈ ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ


Spread the love