ತುಂಬೆ ಡ್ಯಾಂ 6 ಮೀ ಎತ್ತರ ನೀರು ಸಂಗ್ರಹ: ಮುನ್ನೆಚ್ಚರಿಕೆಗೆ ಸೂಚನೆ

Spread the love

ತುಂಬೆ ಡ್ಯಾಂ 6 ಮೀ ಎತ್ತರ ನೀರು ಸಂಗ್ರಹ: ಮುನ್ನೆಚ್ಚರಿಕೆಗೆ ಸೂಚನೆ

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮುಂದಿನ ಬೇಸಿಗೆ ಕಾಲಕ್ಕೆ ನೀರಿನ ಅಭಾವ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು 6 ಮೀ. ಎತ್ತರಕ್ಕೆ ನಿಲ್ಲಿಸಿ, ಸಂಗ್ರಹಣೆ ಮಾಡಲು ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಈ ಪ್ರಯುಕ್ತ ಜನವರಿ 11ರ ಮಧ್ಯ ರಾತ್ರಿಯಿಂದಲೇ ನೀರು ಸಂಗ್ರಹಿಸಲಾಗುವುದು.

ಈ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟಿನ ಮುಳುಗಡೆ ಪ್ರದೇಶದಲ್ಲಿರುವ ಖಾಸಗಿ ಆಸ್ತಿಪಾಸ್ತಿ/ಸ್ವತ್ತುಗಳಿಗೆ ಹಾನಿ ಉಂಟಾಗುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಎಲ್ಲಾ ಸಾರ್ವಜನಿಕರು ನದಿದಡದಲ್ಲಿ ಸಂಚರಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಮಂಗಳೂರು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.


Spread the love