ತುಳು ಪಾತೆರ್ಗ ತುಳು ಒರಿಪಾಗ ದುಬೈ ‘ಗೌಜಿ ಗಮ್ಮತ್’ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ

Spread the love

ತುಳು ಪಾತೆರ್ಗ ತುಳು ಒರಿಪಾಗ ದುಬೈ “ಗೌಜಿ ಗಮ್ಮತ್” ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ

ತುಳು ಪಾತೆರ್ಗ ತುಳು ಒರಿಪಾಗ ದುಬೈ ಯು ಎ ಇ, ಇದರ 11ನೇ ವರ್ಷದ “ಗೌಜಿ ಗಮ್ಮತ್” ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭವು ದುಬೈಯ ಝಾಬೀಲ್ ಪಾರ್ಕ್ ನಲ್ಲಿ ಜರಗಿತು.

ಸಂಸ್ಥೆಯ ಹಿರಿಯ ಸದಸ್ಯರುಗಳಾದ ಸತೀಶ್ ಉಳ್ಳಾಲ್, ನೋವೆಲ್ ಡಿ ಅಲ್ಮೇಡ, ಅಜ್ಮಲ್ ದುಬೈ, ಸಂದೀಪ್ ಕೋಟ್ಯನ್, ಶ್ರೀಮತಿ ಸುಲೋಚನಾ ಜಯ ಅಮೀನ್, ಸುಶೀಲ ಸಂಜೀವ ಪೂಜಾರಿ ಯವರು 3/03/2024 ನೇ ಆದಿತ್ಯವಾರ ದುಬೈಯ ಝಾಬೀಲ್ ಪಾರ್ಕ್ ನಲ್ಲಿ ನಡೆಯಲಿರುವ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು .

ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯ ತನಕ ಪುರುಷರಿಗೆ, ಮಹಿಳೆಯರಿಗೆ, ಹಾಗೂ ಮಕ್ಕಳಿಗೆ, ತುಳುನಾಡಿನ ಲಗೋರಿ, ಕಬ್ಬಡಿ, ಹಗ್ಗ ಜಗ್ಗಾಟ, ಸೈಕಲ್ ಚಕ್ರ ಓಡಿಸುವುದು, ಮುಂತಾದ ಆಟಗಳು ಮತ್ತು ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರಿತೇಶ್ ಅಂಚನ್ ರವರು ಕಾರ್ಯಕ್ರಮಗಳ ಮಾಹಿತಿಯನ್ನು ನೀಡಿ ದುಬೈಯಲ್ಲಿ ನೆಲೆಸಿರುವ ತುಳು ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಂಡರು.
ಸಂಸ್ಥೆಯ ಅಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ವ್ಯವಸ್ಥೆ ಯ ಬಗ್ಗೆ ಚರ್ಚಿಸಿದರು.


Spread the love