ತೆನೆ ಹಬ್ಬಕ್ಕೆ ಮಂಗಳೂರು ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಶುಭಾಶಯ

Spread the love

ತೆನೆ ಹಬ್ಬಕ್ಕೆ ಮಂಗಳೂರು ನಿಯೋಜಿತ ಬಿಷಪ್ ಪೀಟರ್ ಪಾವ್ಲ್ ಶುಭಾಶಯ

ಮಂಗಳೂರು: ಮಾತೆ ಮರಿಯಳ ಹುಟ್ಟು ಹಬ್ಬವಾಗಿ ಕರಾವಳಿ ಕ್ರೈಸ್ತರು ಆಚರಿಸುವ ತೆನೆ ಹಬ್ಬಕ್ಕೆ ಮಂಗಳೂರು ಧರ್ಮಪ್ರಾಂತ್ಯದ ನಿಯೋಜಿತ ಧರ್ಮಾಧ್ಯಕ್ಷ ಅತಿ ವಂ ಡಾ ಪೀಟರ್ ಪಾವ್ಲ್ ಸಲ್ಡಾನಾ ಶುಭ ಹಾರೈಸಿದ್ದಾರೆ.

ಮಾತೆ ಮರಿಯಳು ದೇವರು ರಚಿಸಿದ ಎಲ್ಲಾ ಜೀವಿಗಳಲ್ಲಿ ಅತ್ಯಂತ ಸುಂದರ ಹಾಗೂ ಶ್ರೇಷ್ಟರು. ಅವರು ನಮ್ಮ ಕರ್ತರಾದ ಯೇಸು ಕ್ರಿಸ್ತರ ತಾಯಿ, ಹಾಗೂ ಪ್ರಪಂಚದ ಪ್ರಥಮ ಪ್ರೀತಿಯಾಗಿದ್ದಾರೆ. ಮರಿಯಳ ಜನ್ಮ ದಿನವನ್ನು “ಹೆಣ್ಣು ಮಗುವಿನ” ದಿನವಾಗಿ ಆಚರಿಸುವಾಗ, ವಿವಿಧ ಶೋಷಣೆಗಳಿಗೆ ಒಳಪಟ್ಟು, ಜೀವಿಸುವ ಹಕ್ಕನ್ನು ಕಳೆದುಕೊಳ್ಳುವ ನಮ್ಮ ಸಮಾಜದ ಹೆಣ್ಣು ಮಕ್ಕಳಿಗೊಸ್ಕರ ಪ್ರಾರ್ಥಿಸೋಣ ಅವರನ್ನು ರಕ್ಷಿಸೋಣ. ನಾವು ತೆನೆಂಹಬ್ಬದಂದು ಸ್ವಿಕರಿಸುವ ಹೊಸ ತೆನೆಯು ನಮ್ಮ ಕುಟುಂಬ ಸಂಬಂಧಗಳನ್ನು ದೃಢಪಡಿಸಲಿ ಎಲ್ಲರಿಗೂ ತೆನೆಹಬ್ಬದ ಶುಭಾಶಯಗಳು ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.


Spread the love