ತೊಕ್ಕೊಟ್ಟು: ಯದ್ವಾತದ್ವಾ ಕಾರು ಚಲಾಯಿಸಿ ಭಯ ಹುಟ್ಟಿಸಿದ ಚಾಲಕ

58

ತೊಕ್ಕೊಟ್ಟು: ಯದ್ವಾತದ್ವಾ ಕಾರು ಚಲಾಯಿಸಿ ಭಯ ಹುಟ್ಟಿಸಿದ ಚಾಲಕ

ಮಂಗಳೂರು: ಕಾರನ್ನು ಯದ್ವಾತದ್ವಾ ಒಡಿಸಿ ಸ್ಥಳೀಯರಲ್ಲಿ ಯುವಕನೋರ್ವ ಗಾಬರಿ ಹುಟ್ಟಿಸಿದ ಘಟನೆ ತೊಕ್ಕೊಟ್ಟು ಅಂಬಿಕಾ ರೋಡಿನಲ್ಲಿ ಮಂಗಳವಾರ ನಡೆಸದಿದೆ.

ತಲಪಾಡಿ ಕೆ.ಸಿ.ರೋಡ್ ನಿವಾಸಿ ಸೀರಾಜ್ ಎನ್ನುವ ಯುವಕ ತನ್ನ ಕಾರನ್ನು ಯದ್ವಾತದ್ವಾ ಚಲಾಯಿಸಿದ್ದು ಇದರಿಂದ ಸ್ಥಳೀಯರು ಭಯಭೀತಗೊಂಡಿದ್ದು, ಸ್ಥಳೀಯರು ಸೇರಿ ಕಾರನ್ನು ತಡೆದು ನಿಲ್ಲಿಸಿ ಚಾಲಕ ಸಿರಾಜ್ ಗೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಈ ವೇಳೆ ಸ್ಥಳದಲ್ಲಿ ಎರಡು ಗುಂಪಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಆಗಮಿಸಿದ ಉಳ್ಳಾಲ ಮತ್ತು ದಕ್ಷಿಣ ಟ್ರಾಫಿಕ್ ಠಾಣೆಯ ಪೊಲೀಸರು ಕಾರು ಚಾಲಕ ಸೀರಾಜ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.