ತೋಟವೊಂದರಲ್ಲಿ ಪತ್ನಿಯ ಶವ ಮುಚ್ಚಿಟ್ಟಿದ್ದ ಪತಿ

Spread the love

ಬೆಂಗಳೂರು: ಪತಿಯೇ ಪತ್ನಿಯನ್ನು ಕೊಲೆಗೈದು, ಶವವನ್ನು ತೋಟವೊಂದರಲ್ಲಿ ಮುಚ್ಚಿಟ್ಟಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ನಗರದ ಯಲಹಂಕ ಸಮೀಪದಲ್ಲಿರುವ ವೆಂಕಟಾಲ ಗ್ರಾಮದ ನಿವಾಸಿ ಅಶೋಕ್ ಎಂಬುವವನು ತನ್ನ ಪತ್ನಿ ಮೀನಾಕ್ಷಿಯ ಶೀಲ ಶಂಕಿಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತೋಟವೊಂದರಲ್ಲಿ ಪತ್ನಿಯ ಶವ ಮುಚ್ಚಿಟ್ಟಿದ್ದ ಆತ ಪತ್ನಿ ಕಾಣೆಯಾಗಿದ್ದಾಳೆಂದು ಯಲಹಂಕ ಠಾಣೆಗೆ ದೂರು ನೀಡಿದ್ದಾನೆ.

murder ಮ

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಐದು ದಿನಗಳ ಹಿಂದೆಯೇ ಪತ್ನಿಯನ್ನು ಕೊಲೆಗೈದು ತೋಟವೊಂದರಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದಾನೆ.


Spread the love