ತೋಟ ಬೆಂಗ್ರೆ ಮಧುವನ್ ನಿವಾಸ ಕಳ್ಳತನದ ಆರೋಪಿಯ ಬಂಧನ

ಮಧುವನ್ ನಿವಾಸ ಕಳ್ಳತನದ ಆರೋಪಿಯ ಬಂಧನ

ಮಂಗಳೂರು: ಮಂಗಳೂರು ತಾಲೂಕು ತೋಟ ಬೆಂಗ್ರೆಯಲ್ಲಿರುವ ರಕ್ತೇಶ್ವರಿ ದೇವಸ್ಥಾನ ಹತ್ತಿರ ಇರುವ ಮಧುವನ್ ನಿವಾಸ ಎಂಬಲ್ಲಿ ಕಳ್ಳತನ ಮಾಡಿದ ಆರೋಪಿಯನ್ನು ಸೊತ್ತು ಸಮೇತ ಪತ್ತೆ ಮಾಡಿ ದಸ್ತಗಿರಿ ಮಾಡುವಲ್ಲಿ ಪಣಂಬೂರು ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತ ಆರೋಪಿಯನ್ನು ಪಶ್ಚಿಮ ಬಂಗಾಳದ ನಿವಾಸಿ ಶೇಖ್ ಅಝಾದ್ ಆಲಿ @ ಆಲಿ (46) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ ಕಳವು ಮಾಡಿದ ರೂ 75000 ಮೌಲ್ಯದ ಸುಮಾರು 2.5 ಪವತ್ ತೂಕದ ಚಿನ್ನದ ರೋಪ್ ಚೈನ್, ಮತ್ತು 02 ಗ್ರಾಂ ಚಿನ್ನದ ಉಂಗುರ ಮತ್ತು 04 ಗ್ರಾಂ ತೂಕದ ಚಿನ್ನದ ಉಂಗುರವನ್ನು ವಶಪಡಿಸಿಕೊಳ್ಳಲಾಗಿದೆ.